ಕುಡಿಯುವ ನೀರಿಗಾಗಿ ತುಂಗಭದ್ರೆಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ

ಕುಡಿಯುವ ನೀರಿಗಾಗಿ ತುಂಗಭದ್ರೆಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ

ರಾಣೇಬೆನ್ನೂರು,ಏ.14- ರಾಣೇಬೆನ್ನೂರು ನಗರಸಭೆ ಮತ್ತು ಬ್ಯಾಡಗಿ ಪುರಸಭೆ ಸೇರಿ ಹತ್ತು ಲಕ್ಷ ಅನುದಾನದಲ್ಲಿ ತಾಲ್ಲೂಕಿನ ಮುದೇನೂರ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಮರಳಿನ ಚೀಲಗಳಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಎರಡು ತಿಂಗಳುಗಳಿಗೆ ಆಗುವಷ್ಟು ಕುಡಿಯುವ ನೀರು ಸಂಗ್ರಹಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

350 ಅಡಿ ಉದ್ದ, 20 ಅಡಿ ತಳಪಾಯ ಮತ್ತು 15 ಅಡಿ ಎತ್ತರದ ತಡೆಗೋಡೆ ಇದಾಗಿದ್ದು ರಾಣೇಬೆನ್ನೂರು ನಗರ ಹಾಗೂ ಬ್ಯಾಡಗಿ ಪಟ್ಟಣಗಳಿಗೆ ಎರಡು ತಿಂಗಳು ಕುಡಿಯುವ ನೀರಿನ ತೊಂದರೆ ಆಗಲಾರದು ಎಂದು ಅಧಿಕಾರಿಗಳು ನಂಬುಗೆ ವ್ಯಕ್ತಪಡಿಸಿದ್ದಾರೆ.

ಮುಂಗಾರು ಕೊರತೆಯಿಂದ ತಾಲ್ಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ ಹಾಗೂ ಕುಮದ್ವತಿ ನದಿಗಳಲ್ಲಿ ನೀರು ಸಂಪೂರ್ಣ ಬರಿದಾಗಿದ್ದು, ನಗರ ಮತ್ತು ಕೆಲ ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದನ್ನು ಮನಗಂಡ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಬಸವರಾಜ ಶಿವಣ್ಣನವರ ಅವರುಗಳು ಸರ್ಕಾರದ ಗಮನಕ್ಕೆ ತಂದು ಭದ್ರಾ ಅಣೆಕಟ್ಟೆಯಿಂದ ಎರಡು ಟಿಎಂಸಿ ನೀರು ಹರಿಸಿದ್ದರು.

error: Content is protected !!