ಹರಿಹರ : ಮಳೆಗಾಗಿ ವಿಶೇಷ ಹೋಮ, ಹವನ ಪೂಜೆ

ಹರಿಹರ : ಮಳೆಗಾಗಿ ವಿಶೇಷ ಹೋಮ, ಹವನ ಪೂಜೆ

ಹರಿಹರ, ಏ.14- ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯದಲ್ಲಿ ಮಳೆ, ಬೆಳೆಗಳು ಸಮೃದ್ಧಿಯಾಗಿ, ಜನರು ನೆಮ್ಮದಿ ಜೀವನ ನಡೆಸುವಂತೆ ಶ್ರೀ ಹರಿಹರೇಶ್ವರ ಸ್ವಾಮಿ ಮತ್ತು ಲಕ್ಷ್ಮಿದೇವಿಗೆ ವಿಶೇಷ ಹೋಮ, ಹವನ, ಪೂಜಾ ಕಾರ್ಯಗಳು ಇಂದು ನಡೆದು ನಗರದಲ್ಲಿ ಮಳೆಯ ಸಿಂಚನದ ಸ್ಪರ್ಶವಾಗಿದೆ. 

ಈ ವೇಳೆ ಪ್ರಧಾನ ಜೋಯಿಸರಾದ ಡಾ ಪಂಡಿತ ನಾರಾಯಣ ಅವರು ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಬೆಳಗ್ಗೆಯಿಂದ ಸಂಜೆಯವರಿಗೆ ರಾಜ್ಯದ ಗೋಕರ್ಣ, ಶಿರಸಿ, ಮತ್ತು ಅಂತರರಾಷ್ಟ್ರೀಯ ಮಟ್ಟದ ಮಹಾರಾಷ್ಟ್ರದ ಕೊಲ್ಲಾಪುರ, ಹೈದರಾಬಾದ್ ಸೇರಿದಂತೆ ಇತರೆ ನಗರದ ಸುಮಾರು 130 ಋತ್ವಿಜರು ಅತಿರುದ್ರಾಭಿಷೇಕ, 50 ಋತ್ವಿಜರು ಹೋಮ ಹವನ ಮತ್ತು 15 ಭಟ್ಟರು ಶಾಂತಿಯಾಗ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ಮಾಡಿದರು.

ನಂತರ ಶ್ರೀ ಹರಿಹರೇಶ್ವರ ಸ್ವಾಮಿಗೆ ಮತ್ತು ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಹಾಮಂಗಳಾರತಿ ಮಾಡಿ ನಂತರ ಪ್ರಸಾರ ವಿನಿಯೋಗ ಸೇರಿದಂತೆ ಸಂಜೆ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಸುಮಾರು 32 ಕ್ಕೂ ಹೆಚ್ಚು ಹೋಮ, ಹವನ ಮಾಡಲಾಗಿದೆ ಎಂದು ಹೇಳಿದರು.

ಅದರಲ್ಲಿ ವಿಶೇಷವಾಗಿ ಮಳೆಗಾಗಿ ಸಂಜೀವ ಶಾಸ್ತ್ರೀಯವರ ತಂಡವು ಪರ್ಜನ್ಯ ಹೋಮ,  ಮಹಾರಾಷ್ಟ್ರದ ಸುದರ್ಶನ ಗುರೂಜಿ, ಹೈದರಾ ಬಾದ್ ನ ಸುರೇಶ್ ಭಟ್ ರವರಿಂದ ಹೋಮ ಹವನ, ಪಂಡಿತ ನಾರಾಯಣ ಜೋಯಿಸರು, ಚಿದಂಬರ ಜೋಯಿಸರು ಹರಿಶಂಕರ್ ಜೋಯಿಸರು, ಲಕ್ಷ್ಮೀಕಾಂತ್ ಜೋಯಿಸರು ದೀಕ್ಷಿತ್ ಗುರೂಜಿ ಗೋಕರ್ಣ, ಜಿಗಳೇಕರ್ ಕೊಲ್ಲಾಪುರ ರವರಿಂದ ಅತಿರುದ್ರಾಭಿಷೇಕ, ಬಲ್ವಾರ್ಚಾನೆ ಶ್ರೀ ಹರಿಹರೇಶ್ವರ ದೇವಾಲಯದ ಪ್ರಧಾನ ಅರ್ಚಕರು ಶ್ರೀನಿವಾಸ್ ಮೂರ್ತಿ, ಗುರುಪ್ರಸಾದ್ ರವರು ದೇವರಿಗೆ ಅಲಂಕಾರ, ಮಹಾಮಂಗಳಾರತಿ ಮಾಡಿದರು.  

ಪೂಜಾ ಕಾರ್ಯಗಳನ್ನು ನಗರದಲ್ಲಿ ನಡೆಸುತ್ತಾ ಇರುವುದರಿಂದ ಈಗಾಗಲೇ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಾತಾವರಣದಲ್ಲಿ ಬದಲಾವಣೆ ಕಂಡು, ಮಳೆ ಬೀಳುವ ಲಕ್ಷಣಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹರಿಶಂಕರ್ ಜೋಯಿಸರು, ಚಿದಂಬರ ಜೋಯಿಸರು, ಸುದರ್ಶನ ಗುರೂಜಿ ಮಹಾರಾಷ್ಟ್ರ, ಸುರೇಶ್ ಭಟ್ ಹೈದರಾಬಾದ್, ಬಾಲಚಂದ್ರ ದೀಕ್ಷಿತ್ ಸೋಮಯಾಜಿ ಗೋಕರ್ಣ, ಚಿದಂಬರ ಜೋಯಿಸರು, ವಿಶ್ವನಾಥ್ ಶಾಸ್ತ್ರಿ, ವಿದ್ಯಾನಾಥ್ ಶಾಸ್ತ್ರಿ, ಲಕ್ಷ್ಮೀ ಕಾಂತ್ ಜೋಯಿಸರು, ವಿಜೇಯಂದ್ರ ಶಾಸ್ತ್ರಿ, ಶಂಕರ್ ದೇಸಾಯಿ, ಅನಂತನಾಯ್ಕ್, ಶ್ರೀಧರ್ ಮೂರ್ತಿ, ರಾಘವ್ ಗುರುಪ್ರಸಾದ್, ಸುಧನ್ವ ಆಚಾರ್ , ಶಂಕರ್ ಪ್ರಸಾದ್ ಜಡೆ, ರಾಮೇಶ್ ಭಟ್, ವಾರಿಜಾ ವೆಂಕಟೇಶ್ ಇತರರು ಉಪಸ್ಥಿತರಿದ್ದರು.

error: Content is protected !!