ಕಾಂಗ್ರೆಸ್ ಗ್ಯಾರಂಟಿಗಳು `ಫೇಲ್’

ಕಾಂಗ್ರೆಸ್ ಗ್ಯಾರಂಟಿಗಳು `ಫೇಲ್’

ದಾವಣಗೆರೆ, ಡಿ.4- ಕಾಂಗ್ರೆಸ್ ಪಕ್ಷದ `ಗ್ಯಾರಂಟಿ’ಗಳು ಫೇಲ್ ಆಗಿವೆ. ಮೂರು ರಾಜ್ಯಗಳ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್ ಎಂದು ಟೀಕಿಸಿದ್ದಾರೆ.

 ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿರುವುದು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂಬ ಸ್ಪಷ್ಟ ಸಂದೇಶವನ್ನು ಮತದಾತ ಪ್ರಭುಗಳು ವಿರೋಧ ಪಕ್ಷಗಳಿಗೆ ನೀಡಿದ್ದಾರೆ ಎಂದು ಅವರು ಅಭಿಪ್ರಾಯಿಸಿದ್ದಾರೆ. 

error: Content is protected !!