ಕರಾಟೆ : ಈಗಲ್ ಫಿಟ್‌ನೆಸ್‍ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕರಾಟೆ : ಈಗಲ್ ಫಿಟ್‌ನೆಸ್‍ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದಾವಣಗೆರೆ, ಡಿ.4- ಮಹಾತ್ಮ ಗಾಂಧಿ ಸ್ಮರಣಾರ್ಥ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಫ್-2023 ಶಿವಮೊಗ್ಗದ ಇಂಡೋರ್ ಸ್ಟೇಡಿಯಂನಲ್ಲಿ  ಕಳೆದ ವಾರ ನಡೆಯಿತು. ಈಗಲ್ ಫಿಟ್‍ನೆಸ್ ಮತ್ತು ಮಾರ್ಷಲ್ ಆರ್ಟ್ಸ್‌ ಸೆಂಟರ್‍ನ ವೆಂಕಿ ಸೆನ್ಸಾಯ್‌ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗೆ ಭಾಜನರಾದರು.

ಕಥಾ ವಿಭಾಗದಲ್ಲಿ : ಹರ್ಷಿತ್, ಸಮರ್ಥ, ನಿಧಿ, ಪವನಿಕಾ ಆರ್ಯನ್ ಇವರುಗಳು ಪ್ರಥಮ ಸ್ಥಾನ ಪಡೆದುಕೊಂಡರೆ, ಸಮರ್ಥ ಬಿ.ಎಸ್. ಆರ್ಯ ಪಿ., ಸುಶೀಲ್, ಸಮರ್ಥ, ವಿನಾಯಕ, ಪವಿಕಿರಣ್ ಇವರುಗಳು ದ್ವಿತೀಯ ಸ್ಥಾನ ಹಾಗೂ ಆರ್ಯನ್, ಆರೋಹಿ, ಶ್ರೇಷ್ಠಾ, ಸಾಯಿದ್ರುವ, ಯೋಗೀಶ್, ಋಶಾಂಕ್, ಯಸ್ವಿನ್, ಪುರುಷೋತ್ತಮ್, ಕುಂದನ್, ಅಥರ್ವ, ನಂದಕೃಷ್ಣ, ಅಕ್ಷಯ್, ಆರ್ವಿ ಇವರುಗಳು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಕುಮುತೆ ವಿಭಾಗದಲ್ಲಿ : ಆರ್ಯನ್ ಪ್ರಥಮ ಸ್ಥಾನ, ಹರ್ಷಿತ್, ಪವನಿಕಾ ದ್ವಿತೀಯ ಸ್ಥಾನ ಹಾಗೂ ವಿನಾಯಕ, ಪವಿಕಿರಣ್, ಪುರುಷೋತ್ತಮ್ ಇವರುಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.  ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ತಿಮ್ಮಾರೆಡ್ಡಿ ಫೌಂಡೇಷನ್‍ನ ಟ್ರಸ್ಟಿ
ಡಾ|| ಎ. ತಿಮ್ಮಾರೆಡ್ಡಿ, ಪ್ರಾಂಶುಪಾಲ ಮಹಾಂತೇಶ್ ಕಮ್ಮಾರ್ ಅವರು ಅಭಿನಂದಿಸಿದ್ದಾರೆ.

error: Content is protected !!