ಸೇವೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆದ ಪ್ರಾಥಮಿಕ ಶಾಲಾ ಶಿಕ್ಷಕರು

ದಾವಣಗೆರೆ, ಅ.21- ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ, ತಮ್ಮ ಸೇವೆಯ ಜೊತೆಯಲ್ಲಿಯೇ ಸರ್ಕಾರದ ಗಮನ ಸೆಳೆದರು.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆ ಮೇರೆಗೆ ಹೋರಾಟ ಕೈಗೊಂಡಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯಾವುದೇ ಕುಂಠಿತವಾಗದಂತೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಾವಣಗೆರೆ ದಕ್ಷಿಣ, ಉತ್ತರ ವಲಯ, ಹರಿಹರ, ಜಗಳೂರು, ನ್ಯಾಮತಿ, ಹೊನ್ನಾಳಿ ಸೇರಿದಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ನೇತೃತ್ವ ದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಬೇಡಿಕೆಗಳುಳ್ಳ ಮನವಿ ಸಲ್ಲಿಸಿದ್ದಾರೆ.

ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಸ ಬೇಕು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯ ಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಮಾಡ ಬೇಕು, ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಹಾಗೂ ದೈಹಿಕ ಶಿಕ್ಷಕರ ಸಮಸ್ಯೆ ಬಗೆಹರಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಸಬೇಕೆಂಬುದು ಆಗ್ರಹವಾಗಿದೆ.

ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಇದಕ್ಕಾಗಿ ಇಂದಿನಿಂದ ಇದೇ ದಿನಾಂಕ 29 ರವರೆಗೆ ತರಬೇತಿ ಬಹಿಷ್ಕಾರ ದೊಂದಿಗೆ ಕಪ್ಪು ಪಟ್ಟಿ ಧರಿಸಿ ಶೈಕ್ಷಣಿಕ ಚಟುವ ಟಿಕೆ ನಿರ್ವಹಣಾ ಚಳುವಳಿ ಮಾಡಲಾಗುವುದು. ಈ ಹೋರಾಟಕ್ಕೂ ಸರ್ಕಾರ ನಮ್ಮ ಬೇಡಿಕೆ ಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟ ವಾಗಿ ಇದೇ ದಿನಾಂಕ 30ರಿಂದ ನವೆಂಬರ್ 10 ರವರೆಗೆ ಮಧ್ಯಾಹ್ನದ ಬಿಸಿ ಊಟದ ಮಾಹಿತಿ ಅಪ್ಡೇಟ್ ಮಾಡದೆ ಅಸಹಕಾರ ವ್ಯಕ್ತಪಡಿಸುವುದು. ನವೆಂಬರ್ 11 ರಿಂದ 18 ರವರೆಗೆ ಸ್ಯಾಟ್ಸ್ ಮಾಹಿತಿ ಅಪ್ಡೇಟ್ ಮಾಡದೆ, ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತು ಗಮನ ಸೆಳೆಯಲು ರಾಜ್ಯ ಸಂಘ ತೀರ್ಮಾನಿಸಿದೆ.

ದಕ್ಷಿಣ ವಲಯ ಮನವಿ: ದಾವಣಗೆರೆ ದಕ್ಷಿಣ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈ. ಬಸವರಾಜ್, ಗದ್ದಿಗೆಪ್ಪ ಮ್ಯಾಚರ್, ಎನ್.ಎಂ. ಕರಿಬಸಪ್ಪ, ಪಿ.ಎಂ. ನಾಗರಾಜ್, ಹೆಚ್.ಎಸ್. ನಾಗರಾಜ್, ಜಿ. ಶಿವಕುಮಾರ್, ಪಲ್ಲವಿ, ಸುಧಾ, ರುದ್ರಮ್ಮ, ನಾಗವೇಣಿ, ಶೈಲಜಾ ಮತ್ತಿತರರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಉತ್ತರ ವಲಯ ಮನವಿ: ದಾವಣಗೆರೆ ಉತ್ತರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಜಿ. ಸುಜಾತ, ಕಾರ್ಯದರ್ಶಿ ಬಿ. ಕುಮಾರಸ್ವಾಮಿ, ಉಪಾಧ್ಯಕ್ಷೆ ಎಂ.ಪಿ. ಶೋಭಾರಾಣಿ, ಜಿಲ್ಲಾ ಉಪಾಧ್ಯಕ್ಷೆ ಪಿ ಪದ್ಮಾ, ಖಜಾಂಚಿ ಪಿ. ಕರಿಬಸಪ್ಪ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆರ್.ಯು. ಸೋಮಶೇಖರ್, ರವಿಶಂಕರ್, ನಾಗರಾಜ್, ಮಹಾರುದ್ರಪ್ಪ ಸೇರಿದಂತೆ ಇತರರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

error: Content is protected !!