ಇಂದು `ಚಿರತೆ ಬಂತು ಚಿರತೆ’ ಚಿತ್ರ ತೆರೆಗೆ

`ಚಿರತೆ ಬಂತು ಚಿರತೆ’ ಚಲನಚಿತ್ರ ಇಂದು ರಾಜ್ಯಾ ದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಜಗದೀಶ್ ಮಲ್ನಾಡ್ ಹಾಗೂ `ದವನ ಸಿನಿಪ್ರಿಯ’ ಸಮೂಹದ ಅರುಣ್ ಕುಮಾರ್ ಆರ್.ಟಿ. ತಿಳಿಸಿದ್ದಾರೆ. ದಾವಣಗೆರೆಯ ತ್ರಿಶೂಲ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿ ರುವ ಈ ಚಿತ್ರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದೆ. 

ಈ ಚಿತ್ರದ ಕಥಾವಸ್ತು ಸೃಷ್ಟಿಯ ಪ್ರಾಣಿ ಪ್ರಪಂಚ ದಲ್ಲಿ ಆದಿಯಿಂದಲೂ ಇರುವ ಸಹಬಾಳ್ವೆ ಹಾಗೂ ಪರಸ್ಪರಾವಲಂಬನೆ ಮತ್ತು ಬದುಕು ಹಾಗೂ ಬದುಕಲು ಬಿಡು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ.

ಚಿತ್ರ ಕಥೆಯು ಹಳ್ಳಿಯ ಮುಖಂಡ ಮಾದಪ್ಪನ ಮನೆಯ ಎತ್ತೊಂದನ್ನು ಚಿರತೆ ಮಾರಣಾಂತಿಕ ಘಾಸಿಗೊಳಿಸುವ ಘಟನೆಯಿಂದ ಆರಂಭವಾಗುತ್ತದೆ. ಚಿತ್ರದ ನಾಯಕ ಪಾರ್ಥಪ್ಪ ತನ್ನ ತಂದೆಯಿಂದ ಪರವಾನಿಗೆ ಸಹಿತ ಬಳುವಳಿ ಬಂದ ಬಂದೂಕಿನಿಂದ ಚಿರತೆಯನ್ನು ಕೊಲ್ಲುವಂತೆ ಹಳ್ಳಿ ಮುಖಂಡ ಮಾದಪ್ಪ ಒತ್ತಾಯಿಸುತ್ತಾನೆ. 

ಪಾರ್ಥಪ್ಪನಿಗೆ ವನ್ಯಪ್ರಾಣಿ ಸಂರಕ್ಷಣಾ ಕಾನೂನಿನ ಅರಿವಿರುವುದರಿಂದ ಹಾಗೂ ಸ್ವತಃ ಪ್ರಾಣಿ ಸಂರಕ್ಷಣೆಯ ಕಾಳಜಿ ಹೊಂದಿರುವ ಪರಿಸರ ಸ್ನೇಹಿಯಾಗಿದ್ದರಿಂದ ಚಿರತೆಯನ್ನು ಕೊಲ್ಲಲು ಒಪ್ಪು ವುದಿಲ್ಲ ಎಂದರು. ಹಳ್ಳಿಯ ಜನರಿಗೆ ಚಿರತೆಯನ್ನು ಕೊಲ್ಲುವುದರಿಂದ ಕಾನೂನುರೀತ್ಯಾ ಆಗಬಹುದಾದ ಶಿಕ್ಷೆ ಹಾಗೂ ತೊಡಕುಗಳನ್ನು ತಿಳಿಹೇಳುವ ಪ್ರಯತ್ನ ಮಾಡುತ್ತಾನೆ. ಆದರೂ ಸಹ ಹಳ್ಳಿಯ ಜನ ಚಿರತೆಯಿಂದ ಪಾರಾಗಲು ಮೂಢನಂಬಿಕೆಯಿಂದ ಮಂತ್ರ ವಾದಿಯ ಮೊರೆ ಹೋಗುತ್ತಾರೆ. ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನನ್ನು ಆಯಾ ಕಟ್ಟಿನ ಸ್ಥಳದಲ್ಲಿ ಇರಿಸುತ್ತಾರೆ. ಆದಾಗ್ಯೂ ಊರಿನ ಮುಖಂಡ ಲಂಚಕೊಟ್ಟು ಆತ್ಮ ರಕ್ಷಣೆಯ ನೆಪದಲ್ಲಿ ಬಂದೂಕಿನಿಂದ ಚಿರತೆಯನ್ನು ಕೊಲ್ಲಿಸುವ ಪ್ರಯತ್ನ ಮಾಡುತ್ತಾನೆ. ಅಂತ್ಯದಲ್ಲಿ ಪಾರ್ಥಪ್ಪ ಚಿರತೆ ಕೊಲ್ಲದೆ ಉಳಿಸುವ ಪ್ರಯತ್ನದಲ್ಲಿ ಗೆಲ್ಲು ತ್ತಾನೋ ಅಥವಾ ಹಳ್ಳಿಯ ಜನ ಚಿರತೆಯನ್ನು ಕೊಲ್ಲುವುದ ರಲ್ಲಿ ಸಫಲತೆಯನ್ನು ಸಾಧಿಸುತ್ತಾರೋ ಎಂಬುವು ದನ್ನು ಚಿತ್ರ ನೋಡಿಯೇ ತಿಳಿಯೋಣ.

ಈ ಚಿತ್ರವನ್ನು ಬೆನಕ ಕಿಟ್ಟಿ ಎಂದೇ ಹೆಸರಾಗಿರುವ ರಂಗಕರ್ಮಿ ಸಿ.ಆರ್. ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ.

error: Content is protected !!