21ರಂದು ನಗರದಲ್ಲಿ ಆರೋಗ್ಯ ತಪಾಸಣೆ

ದಾವಣಗೆರೆ, ಏ.17- ನಗರದ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ದಿನಾಂಕ 21ರ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ನಡೆಸಲಾಗುವುದು.

ಭಾರತ್ ಕಾಲೋನಿ 9ನೇ ಕ್ರಾಸ್, ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದ ಹತ್ತಿರ ನಡೆಯಲಿರುವ ತಪಾಸಣಾ ಶಿಬಿರದಲ್ಲಿ ಹೃದಯರೋಗ, ನರರೋಗ, ಮೂತ್ರಪಿಂಡ, ಕ್ಯಾನ್ಸರ್, ಕೀಲು ಮೂಳೆ ಮತ್ತು ಸ್ತ್ರೀ ರೋಗ, ಕಿಡ್ನಿ, ಬಿ.ಪಿ., ಶುಗರ್, ಇಸಿಜಿ ಮತ್ತು ಇಕೋ ಸ್ಕ್ಯಾನಿಂಗ್ ಮುಂತಾದವುಗಳಿಗೆ ಉಚಿತ ತಪಾಸಣೆ ಮತ್ತು ಔಷಧಿ ಹಾಗೂ ಮಾತ್ರೆ ವಿತರಿಸಲಾಗುವುದು. ವಿವರಕ್ಕೆ ಸಂಪರ್ಕಿಸಿ : 97317 82463, 84315 41487, 91644 65550.

error: Content is protected !!