ಜಗಳೂರು ತಾ.ನ ಬಸವನಕೋಟೆಯಲ್ಲಿ ಎತ್ತಿನ ಬಂಡಿಯ ಮೆರವಣಿಗೆ ನಡೆಸಿ ಮತದಾನ ಜಾಗೃತಿ

ಜಗಳೂರು ತಾ.ನ ಬಸವನಕೋಟೆಯಲ್ಲಿ ಎತ್ತಿನ ಬಂಡಿಯ ಮೆರವಣಿಗೆ ನಡೆಸಿ ಮತದಾನ ಜಾಗೃತಿ

ಜಗಳೂರು, ಏ. 17 – ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಎತ್ತಿನ ಬಂಡಿಯ ಮೆರವಣಿಗೆ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತದಾನ ಜಾಗೃತಿ ಮೂಡಿಸಿದರು.

ಸಂವಿಧಾನ ಬದ್ದ ಮತದಾನದ ಹಕ್ಕನ್ನು ಪ್ರತಿಯೊ ಬ್ಬರೂ ಚಲಾಯಿಸಬೇಕು.ಉದ್ಯೋಗ ಹರಸಿ ನಗರ ಪ್ರದೇಶಗಳಿಗೆ ವಲಸೆ ಹೋದವರು ತಪ್ಪದೇ ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕನ್ನು ಗೌರವಿಸಬೇಕು ಎಂದು  ತಾ.ಪಂ.ಇಓ ಶ್ರೀಕಂಠ ರಾಜ ಅರಸ್ ಕರೆ ನೀಡಿದರು.

ಸಿಡಿಪಿಓ ಬೀರೇಂದ್ರ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನನ್ನ ನಡೆ ಮತಗಟ್ಟೆ ಕಡೆ ಅಭಿಯಾನದ ಮೂಲಕ ಮತದಾನ ಜಾಗೃತಿ ಮೂಡಿಸ ಲಾಗುತ್ತಿದೆ.ವಯೋವೃದ್ದರಿಗೆ, ವಿಕಲಚೇತನರಿಗೆ ವಿಶೇಷ ವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ  ಎಂದರು. 

ಈ ಸಂದರ್ಭದಲ್ಲಿ ಪಿಡಿಓ ತಿಮ್ಮೇಶ್, ಬಿಲ್ ಕಲೆಕ್ಟರ್ ಕರಿಬಸಪ್ಪ, ಸಿಬ್ಬಂದಿಗಳು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

error: Content is protected !!