ಕುಂಬಳೂರಿನಲ್ಲಿ 27ರಂದು ಹನುಮಂತ ದೇವರ ರಥೋತ್ಸವ

ಕುಂಬಳೂರಿನಲ್ಲಿ 27ರಂದು ಹನುಮಂತ ದೇವರ ರಥೋತ್ಸವ

ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವು ಇದೇ ದಿನಾಂಕ 27ರ ಬುಧವಾರ ಜರುಗಲಿದೆ. 

ಇಂದು ರಾತ್ರಿ 3.30 ಕ್ಕೆ ಕಂಕಣಧಾರಣೆ, ನಾಳೆ ಶನಿವಾರ ರಾತ್ರಿ 9.30 ಕ್ಕೆ ಗಿಣಿ ಉತ್ಸವ, ದಿನಾಂಕ 24ರ ಭಾನುವಾರ ರಾತ್ರಿ 9.30 ಕ್ಕೆ ಚಿಗರಿ ಉತ್ಸವ, ದಿನಾಂಕ 25ರ ಸೋಮವಾರ ರಾತ್ರಿ 9.30ಕ್ಕೆ ಕುದುರೆ ಉತ್ಸವದ ನಂತರ ರಾತ್ರಿ 12ಕ್ಕೆ ಮಹಾರಥಕ್ಕೆ ಕಳಸ ಸ್ಥಾಪನೆ ಮಾಡಲಾಗುವುದು.

ದಿನಾಂಕ 26ರ ಮಂಗಳವಾರ ಬೆಳಿಗ್ಗೆ 8.30ಕ್ಕೆ ಆನೆ ಉತ್ಸವ, ಮಧ್ಯಾಹ್ನ 12ಕ್ಕೆ ಹರಿಸೇವೆ. ಭಕ್ತಾದಿಗಳಿಂದ ಹರಕೆ, ಬಾಯಿಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ಸೇರಿದಂತೆ ವಿವಿಧ ಹರಕೆಗಳು ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದೆ.

ದಿನಾಂಕ 27 ಬುಧವಾರ ಬೆಳಗಿನ ಜಾವ 5 ಗಂಟೆಗೆ ಸ್ವಾಮಿಯ `ಮಹಾರಥೋತ್ಸವವು’ ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ ದೇವರಗಳೊಡಗೊಡಿ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಶ್ರೀ ಸ್ವಾಮಿಯ ಬೇಟೆ ಆಡಿ ಬರುವುದಕ್ಕೆ ಹೋಗುವುದು, ನಂತರ 11.30ರವರೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದ್ದು, ಅನ್ನ ಸಂತರ್ಪಣೆ ನಡೆಯಲಿದೆ. 

ಸಂಜೆ 4 ಗಂಟೆಗೆ ಮುಳ್ಳು ತುಳಿಯುವುದು, ಶ್ರೀ ಸ್ವಾಮಿಯು ಕುದುರೆ ವಾಹನದ ಮೇಲೆ ಕುಣಿಯುವುದು,  ಇರುತ್ತದೆ. ರಾತ್ರಿ 9 ಕ್ಕೆ ಕಂಕಣ ಬಿಚ್ಚುವುದು, ನಂತರ ಓಕಳಿ, ಭೂತಗಳ ಮಣೇವು ಸೇವೆಯೊಂದಿಗೆ ಜಾತ್ರಾ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಸಂಜಯ್ ಶ್ರೀನಿವಾಸರಾವ್, ರಾಜೀವ್‌ ಭೀಮರಾವ್‌ ತಿಳಿಸಿದ್ದಾರೆ.

error: Content is protected !!