ಎಸ್ಸೆಸ್ಸೆಲ್ಸಿ ಪರೀಕ್ಷೆ : ಸೇಂಟ್ ಜಾನ್ಸ್ ಶಾಲೆಗೆ ಶೇ. 100 ಫಲಿತಾಂಶ

ದಾವಣಗೆರೆ, ಮೇ 9- ನಗರದ ಸೇಂಟ್ ಜಾನ್ಸ್ ಶಾಲೆಗೆ ಶೇ. 100 ಫಲಿತಾಂಶ  ಲಭಿಸಿದ್ದು, ಕು. ಅಮೂಲ್ಯ ಎನ್.ಎಸ್. ಹಾಗೂ ವರ್ಷಿತಾ ಹೆಚ್.ಕೆ. 605 ಅಂಕಗಳೊಂದಿಗೆ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 20 ಡಿಸ್ಟಿಂಕ್ಷನ್, 35 ಪ್ರಥಮ ದರ್ಜೆ, 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಹಾಗೂ ಶಾಲೆಯ ಶಿಕ್ಷಕರನ್ನು ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

error: Content is protected !!