4 ವರ್ಷದ ಪದವಿ ಹಿಂಪಡೆದ ಸರ್ಕಾರ; ಹೋರಾಟಕ್ಕೆ ಜಯ : ಎಐಡಿಎಸ್ಓ

ದಾವಣಗೆರೆ, ಮೇ 9- ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್ಓ ಸ್ವಾಗತಿಸಿದೆ. 

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಿಂದ ವ್ಯಕ್ತವಾದ ಅಪಾರ ಪ್ರತಿರೋಧದ ಪ್ರತಿಫಲವಾಗಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಂಬಂಧ  ರಾಜ್ಯವ್ಯಾಪಿ ಎಐಡಿಎಸ್ಓ ನಡೆಸಿದ ಸಮೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು 4 ವರ್ಷದ ಪದವಿಯನ್ನು ವಿರೋಧಿಸಿದ್ದರು. ಇದು ರಾಜ್ಯದಲ್ಲಿ ನಡೆದ ಹೋರಾಟಕ್ಕೆ ಸಂದಿರುವ ಐತಿಹಾಸಿಕ ಜಯವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಅಜಯ್ ತಿಳಿಸಿದ್ದಾರೆ.  

ಹಿಂದಿನ ಬಿಜೆಪಿ ಸರ್ಕಾರವು, ಯಾವುದೇ ಸಮಾಲೋಚನೆ ನಡೆಸದೆ, ಅತ್ಯಂತ ಅಪ್ರಜಾತಾಂತ್ರಿಕವಾಗಿ 4 ವರ್ಷದ ಪದವಿಯನ್ನು ಹೇರಿಕೆ ಮಾಡಿತ್ತು.     ಈ ಹೇರಿಕೆಯನ್ನು ಹಿಮ್ಮೆಟ್ಟಿಸಿರುವುದು  ವಿದ್ಯಾರ್ಥಿ ಚಳುವಳಿಯ  ಜಯವಾಗಿದೆ. ಇದಕ್ಕಾಗಿ ಐಕ್ಯ ಹೋರಾಟ ನಡೆಸಿದ ರಾಜ್ಯದ ವಿದ್ಯಾರ್ಥಿ ಸಮೂಹವನ್ನು ಎಐಡಿಎಸ್ಓ ಅಭಿನಂದಿಸುತ್ತದೆ ಎಂದು  ಎಐಡಿಎಸ್ಓ  ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ. ಎಸ್. ತಿಳಿಸಿದ್ದಾರೆ.  

error: Content is protected !!