ಲೋಕ ಕಲ್ಯಾಣಕ್ಕೆ ಭಗವಂತನಾಗಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು

ಲೋಕ ಕಲ್ಯಾಣಕ್ಕೆ ಭಗವಂತನಾಗಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು

ನಾಡಿನಾದ್ಯಂತ ನಾಡಿದ್ದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ

ವೀರಶೈವ ಧರ್ಮ ಅತ್ಶಂತ ಪ್ರಾಚೀನ. ಇದರ ಇತಿಹಾಸ  ಮತ್ತು ಪರಂಪರೆ ಅಪೂರ್ವ – ಅಮೋಘ. ಕಾಯಕ ಮತ್ತು ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ಜ್ಞಾನ ಕರ್ಮ ಸಮುಚ್ಫಯದಿಂದ ಕೂಡಿದ ವೀರಶೈವ ಧರ್ಮದಲ್ಲಿ ವ್ಶಕ್ತಿ ನಿಷ್ಠೆಗಿಂತ ತತ್ವನಿಷ್ಠೆಗೆ  ಚರಿತ್ರೆಗಿಂತ ಚಾರಿತ್ರ್ಶಕ್ಕೆ  ಸ್ಥಾವರಕ್ಕಿಂತ  ಜಂಗಮಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದೆ.

ಪರಶಿವನ ಪಂಚಮುಖಗಳಾದ ಸದ್ಶೋಜಾತ  ವಾಮದೇವ  ಅಘೋರ ತತ್ಪುರುಷ ಮತ್ತು ಈಶಾನ ಮುಖಗಳಿಂದ ಆವಿರ್ಭವಿಸಿದವರೇ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಶಿವನ ಸದ್ಶೋಜಾತ ಮುಖದಿಂದ ಶ್ರೀ ಜಗದ್ಗುರು ರೇಣುಕರು 

ವಾಮದೇವ ಮುಖದಿಂದ ಶ್ರೀ ಜಗದ್ಗುರು ದಾರುಕರು   ಅಘೋರ ಮುಖದಿಂದ ಶ್ರೀ ಜಗದ್ಗುರು ಘಂಟಾಕರ್ಣರು.  ತತ್ಪುರುಷ ಮುಖದಿಂದ ಶ್ರೀ ಜಗದ್ಗುರು ಧೇನುಕರ್ಣರು ಮತ್ತು   ಈಶಾನ ಮುಖದಿಂದ  ಶ್ರೀ ಜಗದ್ಗುರು ವಿಶ್ವಕರ್ಣ ಗಣಾಧೀಶ್ವರರಾಗಿ ಅವತರಿಸಿದರು. ಶ್ರೀ ಜಗದ್ಗುರು ಪಂಚಾಚಾರ್ಯರು ಲಿಂಗೋದ್ಭವರಾಗಿ ಅವತರಿಸಿದ್ದರಿಂದ ಪಂಚಪೀಠಗಳು ರಾಷ್ಟ್ರೀಯ ಗುರುಪೀಠಗಳಾಗಿ ದೇವಲೋಕದ ನಂದಾದೀಪದಂತೆ ಇಂದಿಗೂ ಕಂಗೊಳಿಸುತ್ತಿವೆ.

ತೆಲಂಗಾಣ ರಾಜ್ಶದ  ಕೊಲನುಪಾಕ ಸುಕ್ಷೇತ್ರ ಸ್ವಯಂಭೂ ಶ್ರೀಸೋಮೇಶ್ವರ ಮಹಾಲಿಂಗದಿಂದ  ಆವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಗೋತ್ರ – ಪಡ್ವಡಿ ಸೂತ್ರ – ಪೃಥ್ವಿ ತತ್ವದ ಅಧಿನಾಯಕರಾಗಿ  ಸೃಷ್ಠಿ ಸೌಂದರ್ಯದ ಮಡಿಲು ಭದ್ರಾ ನದಿ ತಟದ ಮಲಯಾಚಲ ತಪೋಭೂಮಿ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಪೀಠವನ್ನು ಸಂಸ್ಥಾಪಿಸಿ ಆದರ್ಶ ಪರಂಪರೆಯ ಪರಮಾಚಾರ್ಯರನ್ನು ಕೊಟ್ಟ ಕೀರ್ತಿ ಇವರದ್ದಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕೃತ ಯುಗದಲ್ಲಿ ಏಕಾಕ್ಷರ ಶಿವಾಚಾರ್ಯರಾಗಿ ತ್ರೇತಾಯುಗದಲ್ಲಿ ಏಕವಕ್ತ ಶಿವಾಚಾರ್ಯರಾಗಿ ದ್ವಾಪರ ಯುಗದಲ್ಲಿ ಶ್ರೀ ರೇಣುಕಾಚಾರ್ಯರಾಗಿ ಮತ್ತು ಕಲಿಯುಗದಲ್ಲಿ ಶ್ರೀ ರೇವಣಸಿದ್ಧರಾಗಿ ಅವತರಿಸಿ ವೀರಶೈವ ಧರ್ಮ, ಸಂಸ್ಕೃತಿಯನ್ನು ಸ್ಥಾಪಿಸಿ, ಬೆಳೆಸಿ, ಉಳಿಸಿದ್ದನ್ನು ಎಂದಿಗೂ ಮರೆಯಲಾಗದು.

ಪರಶಿವನ ವಾಣಿಯಂತೆ ಧರ್ಮ ಸಂರಕ್ಷಣೆಗಾಗಿ  ಅವತರಿಸಿ, ಶಿವಜ್ಞಾನದ ಬೆಳಕನ್ನು ಬೀರುವ ಮೂಲಕ ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. 

ಶ್ರೀ ರೇಣುಕಾಚಾರ್ಯರು ಸಾಮಾನ್ಶರಲ್ಲ, ಅಸಾಮಾನ್ಶ ಘನ ವ್ಶಕ್ತಿತ್ವ ಹೊಂದಿದ ಸಕಲ ಸಮುದಾಯಗಳ ಹಿತವನ್ನು ಬಯಸಿದವರು. ಅಲ್ಲದೇ ಜನಸಮುದಾಯದಲ್ಲಿ ಧಾರ್ಮಿಕ – ಸಾಮಾಜಿಕ ಸತ್ಕ್ರಾಂತಿಗೈದ ಪರಮಾಚಾರ್ಯರು. ಕೊಲನುಪಾಕ ಸ್ವಯಂಭೂ ಶ್ರೀ ಸೋಮೇಶ್ವರ  ಸುಕ್ಷೇತ್ರದಲ್ಲಿ ಹದಿನೆಂಟು ಜಾತಿ ಜನಾಂಗಗಳ ಧಾರ್ಮಿಕ ಕೇಂದ್ರಗಳನ್ನು  ಹುಟ್ಟುಹಾಕಿ ಸಂಸ್ಕಾರ – ಸಂಸ್ಕೃತಿ ಅರುಹಿದ ಯುಗಪುರುಷರು. ಪುರುಷರಂತೆ ಮಹಿಳೆಯರಿಗೂ ಧಾರ್ಮಿಕ ಸ್ವಾತಂತ್ರ್ಶ ತಂದುಕೊಟ್ಟ ಪ್ರಥಮಾಚಾರ್ಯರು. ಕಾಯಕ ಮತ್ತು ದಾಸೋಹ ಭಾವನೆ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರು. ಸಪ್ತ ಸಮುದ್ರದ ನೀರನ್ನು ಪಾನ ಮಾಡಿದ ವಾತಾಪಿ ಇಲ್ವಲ ರಾಕ್ಷಸರನ್ನು ಸಂಹರಿಸಿದ  ವಿಂಧ್ಯಾಪರ್ವತದ ಗರ್ವವನ್ನು ಹರಣ ಮಾಡಿದ ನಹುಷ ಚಕ್ರವರ್ತಿಯ ದರ್ಪ ದುರಂಹಕಾರವನ್ನು ನಾಶಗೊಳಿಸಿದ ಮಹಾಮುನಿ ಶ್ರೇಷ್ಠರಾದ ಅಗಸ್ತ್ಶ  ಮಹರ್ಷಿಗಳಿಗೆ ವೀರಶೈವ ಧರ್ಮದ ಪರಮ ರಹಸ್ಶವಾದ  ಶಿವಾದ್ವೈತ ಸಿದ್ಧಾಂತವನ್ನು ಧಾರೆಎರೆದ ಪುಣ್ಶಸ್ಥಳವೇ ಬಾಳೆಹೊನ್ನೂರು ಶ್ರೀರಂಭಾಪುರಿ ಮಹಾಪೀಠವು ಜ್ಞಾನ ಗಂಗೋತ್ರಿಯಾಗಿ ನೆಲೆಗೊಂಡಿದೆ. 

 ಶ್ರೀ ರೇಣುಕರು ಅನುಗ್ರಹಿಸಿದ ಶಿವಾದ್ವೈತ ಸಿದ್ಧಾಂತ ಸಾರವೇ ವೀರಶೈವ ಧರ್ಮದ ಶ್ರೇಷ್ಠ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯಾಗಿದೆ. ಶ್ರೀ ಶಿವಯೋಗಿ ಶಿವಾಚಾರ್ಯರಿಂದ ವಿರಚಿತವಾದ ಈ ಪವಿತ್ರ ಗ್ರಂಥವು ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಥಮ ಗ್ರಂಥವಾಗಿದೆ. ಕ್ರಿ.ಶ.1060 ರಲ್ಲಿ ರಚಿತವಾದ ಶ್ರೀಪತಿ ಪಂಡಿತರ ಶ್ರೀಕರ ಭಾಷ್ಶದಲ್ಲಿ ಈ ಗ್ರಂಥದ ಉಲ್ಲೇಖವಿದ್ದು ಇದರಲ್ಲಿ ಜೀವನ ದರ್ಶನದ ಹೆಜ್ಜೆಗಳನ್ನು ಇಂದಿಗೂ ಕಾಣಬಹುದು.

ಲೋಕ ಕಲ್ಶಾಣ ಹಾಗೂ ವಿಶ್ವಶಾಂತಿಗಾಗಿ ಸದಾಕಾಲ ಶ್ರಮಿಸಿದ ಶ್ರೀ ರೇಣುಕಾಚಾರ್ಯರು ಶಿವಭಕ್ತನಾದ ರಾವಣನು ಒಂಭತ್ತು ಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆಂಬ ಮಹಾಸಂಕಲ್ಪ ಹೊಂದಿದ್ದನು. ಆದರೆ, ಆರು ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿ ಉಳಿದ ಮೂರು ಕೋಟಿ ಶಿವಲಿಂಗಗಳನ್ನು  ಸ್ಥಾಪಿಸುವ ಅಭಿಲಾಷೆ ಇರುವಾಗಲೇ ರಾಮ – ರಾವಣರ ಯುದ್ಧದಲ್ಲಿ ರಾವಣನು ಹತನಾದನು. ಜೀವನದ ಕೊನೆಹಂತದಲ್ಲಿ ತಮ್ಮನಾದ ವಿಭೀಷಣನನ್ನು ಕರೆದು ಉಳಿದ ಮೂರು ಕೋಟಿ ಶಿವಲಿಂಗ ಸ್ಥಾಪಿಸಿ ತನ್ನ ಸಂಕಲ್ಪ ಪೂರ್ಣಗೊಳಿಸಲು ತಿಳಿಸಿದ್ದರಿಂದ ವಿಭೀಷಣನು ಮಹಾಚಾರ್ಯರಾದ ಶ್ರೀ ಜಗದ್ಗುರು ರೇಣುಕಾಚಾರ್ಯರಲ್ಲಿ ಪ್ರಾರ್ಥಿಸಿಕೊಂಡಾಗ ಮೂರುಕೋಟಿ ಗುರು ರೂಪಧರಿಸಿ ಏಕಕಾಲದಲ್ಲೇ ಮೂರು ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ  ಮಹಾಮಹಿಮಾ ಪುರುಷರು ಶ್ರೀ ರೇಣುಕಾಚಾರ್ಯರಾಗಿದ್ದಾರೆ. 

ಈ ಅದ್ಭುತವಾದ ಲೀಲೆಯ ಐತಿಹಾಸಿಕ ಸತ್ಶವನ್ನು ಇಂದಿಗೂ ಶ್ರೀಲಂಕಾ ದೇಶದ  ಜಾಪ್ನಾ ಸಮೀಪದಲ್ಲಿ  ಶ್ರೀ ರೇಣುಕಾಶ್ರಮ  ರೇಣುಕವನ ಶಿವಲಿಂಗಗಳಿರುವ ಮಹಾಕುರು ವನ್ನು ಕಾಣಬಹುದಾಗಿದೆ. ಶ್ರೀ ರೇಣುಕಾಚಾರ್ಯರು ಮಾಡಿದ ಧಾರ್ಮಿಕ ಸಾಮಾಜಿಕ ಸತ್ಕ್ರಾಂತಿಯನ್ನು ಇಪ್ಪತ್ತೆಂಟು ಆಗಮ ಗಳಲ್ಲಿ ಒಂದಾಗಿರುವ ವೀರಾಗಮದಲ್ಲಿ ನೋಡಬಹುದು. ಅಂದಿನ ಕಾಲಗರ್ಭದಲ್ಲೇ ದಲಿತ ಮಾತಂಗನಿಗೆ ಶಿವದೀಕ್ಷೆಯನ್ನಿತ್ತು, ಅಸ್ಪೃಶ್ಶರ ಉದ್ಧಾರ  ಮಹಿಳೆಯರಿಗೆ ಅಂದೇ ಧಾರ್ಮಿಕ ಸ್ವಾತಂತ್ರ್ಯ, ದಾಸೋಹ, ಅರವಟ್ಟಿಗೆ, ಭೂರುದ್ರ ಭಕ್ತ ಸಂಘಗಳ ಸ್ಥಾಪನೆ, ಬಡ ಜನರ  ಉದ್ಧಾರ, ರೈತ ಸಮು ದಾಯಗಳ ಬಗೆಗೆ ಅವರಿಗಿದ್ದ ದೂರದೃಷ್ಟಿಯ ಸಾಮಾಜಿಕ ಕಳಕಳಿಯನ್ನು ನಾವು ಇಂದಿಗೂ ಕಾಣಬಹುದಾಗಿದೆ. 

ಶ್ರೀ ರೇಣುಕಾಚಾರ್ಯರು ಶಿಂಶುಮಾರ ಡಿಂಡಿಮಾರ ಶತಾನಂದರಂಥವರನ್ನು ಧರ್ಮ ಸಂಸ್ಕೃತಿಯ ಸಂವರ್ಧನೆಗೆ ಪ್ರೇರೇಪಿಸಿದ ಧರ್ಮಧೂತರಾಗಿದ್ದಾರೆ. ಅವರು ಬೋಧಿಸಿದ ಅಹಿಂಸಾ ಸತ್ಶ ಅಸ್ತೇಯ ಬ್ರಹ್ಮಚರ್ಯ ದಯಾ ಕ್ಷಮಾ ದಾನ ಪೂಜಾ ಜಪ ಧ್ಶಾನ ಎಂಬ ವಿಶ್ವಬಂಧುತ್ವದ ವೀರಶೈವ ಧರ್ಮದ ದಶವಿಧ ಸೂತ್ರಗಳು ಸಕಲರಿಗೂ ದಾರಿದೀಪವಾಗಿವೆ. ಸಮಾಜದಲ್ಲಿ ಸಾಮರಸ್ಶ ಸೌಹಾರ್ದತೆ  ಸಮನ್ವಯತೆ ಸಂಸ್ಕೃತಿ ಸಭ್ಶತೆ  ಉಳಿದು ಬೆಳೆದು ಬರಲು ಪ್ರಾಮಾಣಿಕ ಪ್ರಯತ್ನ ಮಾಡಿದ ಹರಿಕಾರರಾಗಿದ್ದಾರೆ. ಲೋಕೋದ್ಧಾರ ಕಾರ್ಯವನ್ನು ಹೊತ್ತು ನಾಡಿನಲ್ಲೆಡೆ ಸಂಚರಿಸಿ ಧರ್ಮಪ್ರಜ್ಞೆ ಸಾಮಾಜಿಕ ಅರಿವನ್ನು ಮೂಡಿಸಿ  ಲೋಕ ಕಲ್ಶಾಣಕ್ಕಾಗಿ ಭೂಲೋಕದಲ್ಲಿ ಅವತರಿಸಿ ಭಕ್ತ ಸಮೂಹದ ಪಾಲಿಗೆ ಭಗವಂತರಾಗಿದ್ದಾರೆ. 

ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಪ್ರಥಮ ಪೀಠವಾದ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಶ್ರೀಪೀಠದಲ್ಲಿ 120 ಜಗದ್ಗುರುಗಳು  ಪೀಠಾರೋಹಣ ಹೊಂದಿ ಶಿವಜ್ಞಾನದ ಬೆಳಕನ್ನು ಅನುಗ್ರಹಿಸಿದ್ದಾರೆ. 121 ನೇ ಜಗದ್ಗುರು ಗಳಾಗಿ ಶ್ರೀಪೀಠಾರೋಹಣ ಹೊಂದಿರುವ ಪ್ರಸ್ತುತ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ  ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಹಾಮಹಿಮಾನ್ವಿತರು.

ಜಗದ್ಗುರುಗಳವರು ಅರ್ಥಪೂರ್ಣ ಧರ್ಮಸಮಾರಂಭ ಗಳನ್ನು ನೆರವೇರಿಸುತ್ತಾ, ಭೂಲೋಕದಲ್ಲಿ ಶ್ರೀ ರೇಣುಕಾ ಚಾರ್ಯರು ಅವತರಿಸಿದ ಕೊಲ್ಲಿಪಾಕಿ ಸುಕ್ಷೇತ್ರವನ್ನು ಅಭಿವೃದ್ಧಿ ಗೊಳಿಸುತ್ತಿರುವ ಜೊತೆಗೆ  ವೀರಶೈವ ಧರ್ಮದ ಚಾರಿತ್ರ್ಯಿಕ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ಬಾಳೆಹೊನ್ನೂರು ಧರ್ಮಪೀಠದಲ್ಲಿ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಸುಂದರ ಶಿಲಾಮೂರ್ತಿಯನ್ನು ಈಗಾಗಲೇ ನಿರ್ಮಾಣಗೊಳಿಸುತ್ತಿರುವ ಮಹಾಸಂಕಲ್ಪ ನಮ್ಮೆಲ್ಲರ ಸೌಭಾಗ್ಶ.

ಪ್ರತಿ ವರ್ಷ ಪಾಲ್ಗುಣ ಶುದ್ಧ ತ್ರಯೋದಶಿ ಪವಿತ್ರ ದಿನದಂದು ಅವತರಿಸಿದ ಆದಿಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಧರ್ಮ ಸಮಾರಂಭವು ಬಾಳೆಹೊನ್ನೂರು ಶ್ರೀರಂಭಾಪುರಿ ಧರ್ಮಪೀಠದಲ್ಲಿ ದಿನಾಂಕ 22-03-2024 ರಂದು ಅಸಂಖ್ಶಾತ ಭಕ್ತಸಂಕುಲದೊಂದಿಗೆ ಸಂಭ್ರಮದಿಂದ ಜರುಗಲಿದೆ. ಈ ನಿಮಿತ್ತ ದಿನಾಂಕ 20-03-2024 ರಿಂದ 26-03-2024 ರವರೆಗೆ ಕಾರ್ಯಕ್ರಮಗಳು ಜರುಗಲಿವೆ.

  ಶ್ರೀ ಜಗದ್ಗುರುಗಳವರ ಅಪ್ಪಣೆಯ ಪ್ರಕಾರ ಸರ್ಕಾರದ ಆದೇಶದಂತೆ ನಾಡಿನಾದ್ಶಾಂತ ದಿನಾಂಕ  23-03-2024ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯು ಶ್ರದ್ಧಾ ಭಕ್ತಿಯೊಂದಿಗೆ ಜರುಗಲಿದೆ.

 – ಶ್ರೀಮಲ್ಲಿಕಾರ್ಜುನ  ಸ್ವಾಮಿ ಕಲ್ಮಠ, ಕ್ರಿಯಾಮೂರ್ತಿಗಳು, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ, ಚಿರಸ್ತಹಳ್ಳಿ – ಹರಪನಹಳ್ಳಿ.

error: Content is protected !!