ಯುನೈಟೆಡ್ ಇಂಟರ್‌ನ್ಯಾಷನಲ್ ಶಾಲೆಗೆ ಶೇ. 100 ಫಲಿತಾಂಶ

ದಾವಣಗೆರೆ, ಮೇ 9- ನಗರದ ಯುನೈಟೆಡ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮೊದಲ ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ.

ಅರಫಾ ರಹಮಾನ್ 540 ಅಂಕ  ಗಳಿಸುವ ಮೂಲಕ ಶಾಲೆಗೆ ಮೊದಲ ಸ್ಥಾನ, ಅಲ್ಫಿಯಾ ಬಾನು 527 ಅಂಕ ಹಾಗೂ ಅರ್ಫ ಬಾನು 508 ಅಂಕ ಪಡೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲೆಯ ಛೇರ್ಮನ್ ಬಿ. ದಾದಾಪೀರ್, ಪ್ರಾಚಾರ್ಯ ಇಷ್ತಿಯಾಕ್ ಖಾನ್ ಪಠಾನ್, ಕೋ ಆರ್ಡಿನೇಟರ್ ಶ್ರೀಮತಿ ಶಫುನ್ನೀಸ, ಆಡಳಿತಾಧಿಕಾರಿ ಅಶ್ಪಾಕ್ ಅಹ್ಮದ್ ಪಾಣಿಬಂದ್, ಇಸ್ಲಾಮಿಕ್ ಸ್ಟಡೀಸ್‌ನ ಹೆಚ್.ಓ.ಡಿ ಶೋಯೇಬ್ ನಯಿಮಿ ಹಾಗೂ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

error: Content is protected !!