ಎಲೆಬೇತೂರಿನ ತರಳಬಾಳು ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ : ಸುಪ್ರಭೆ ಶಾಲೆಗೆ ಪ್ರಥಮ

ಎಲೆಬೇತೂರಿನ ತರಳಬಾಳು ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ : ಸುಪ್ರಭೆ ಶಾಲೆಗೆ ಪ್ರಥಮ

ಎಲೆಬೇತೂರು, ಮೇ 9- ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಇಲ್ಲಿನ ಶ್ರೀ ಕೊಂಡಜ್ಜಿ ಬಸಪ್ಪ ಮತ್ತು ಶ್ರೀ ತರಳಬಾಳು ಪ್ರೌಢಶಾಲೆಯ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು (ಶೇ. 88) ಉತ್ತೀರ್ಣರಾಗಿದ್ದಾರೆ. 

ಡಿ.ಎಸ್.ಸುಪ್ರಭೆ 608 (ಶೇ.97.28). ಇದು ಶಾಲೆಯ ಸಾರ್ವಕಾಲಿಕ ದಾಖಲೆಯಾಗಿದ್ದು, ಇಲ್ಲಿಯೇ ಅಧ್ಯಾಪಕರಾಗಿರುವ ಹೆಚ್.ಎಸ್.ದ್ಯಾಮೇಶ್ ಮತ್ತು ಹೊಳಲ್ಕೆರೆ ತಾಲ್ಲೂಕು ಕೆಂಚಾಪುರದ ಶ್ರೀ ರಂಗನಾಥ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎಸ್.ಸುಜಾತ ದಂಪತಿ ಪುತ್ರಿ. 

ಹಿಂದಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾಳೆ. ತಮ್ಮ ಮಕ್ಕಳನ್ನು ತಮ್ಮದೇ ಶಾಲೆಯಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಸೇರಿಸಿ, ಉತ್ತಮ ದಾಖಲೆ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ. 

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿನಿ ಟಿ.ವಿದ್ಯಾ – 553 (ಶೇ.88.48) ಪಡೆದು ದ್ವಿತೀಯ ಸ್ಥಾನದಲ್ಲಿದ್ದಾಳೆ.

ಆಂಗ್ಲ ಮಾಧ್ಯಮದಲ್ಲಿ 15 ಜನ ವಿದ್ಯಾರ್ಥಿಗಳಲ್ಲಿ (ಶೇ.93.33) ಅದರಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಕೆ.ಆರ್.ಅನನ್ಯ – 585 (ಶೇ.93.66), ಹಾಗೂ ಹೆಚ್.ಪಿ.ಆದರ್ಶ – 552 (ಶೇ.88.32) ಉತ್ತೀರ್ಣರಾಗಿದ್ದಾರೆ.

error: Content is protected !!