ಕುಂಬಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಆನಂದ್

ಕುಂಬಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಆನಂದ್

ಮಲೇಬೆನ್ನೂರು, ಮಾ. 21- ಕುಂಬಳೂರು ಗ್ರಾಮ ಪಂಚಾಯ್ತಿ   ಉಪಾಧ್ಯಕ್ಷರಾಗಿ ಕೆ.ಎಸ್. ಆನಂದ್ ಅವರು ಈಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ನಿಟ್ಟೂರಿನ ಶ್ರೀಮತಿ ಚಂದ್ರಮ್ಮ ಮಂಜುನಾಥ್ ಅವರು 5 ಮತಗಳನ್ನು ಪರಾಭವಗೊಂಡರೆ, ಕೆ.ಎಸ್. ಆನಂದ್ 12 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನಾಗೋಳ್ ಕಲ್ಲೇಶ್ ಅವರ ರಾಜೀನಾಮೆಯಿಂದಾಗಿ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಮಾದೇವಿ ಎಂ.ಹೆಚ್. ಶಿವರಾಮಚಂದ್ರಪ್ಪ, ಪಿಡಿಓ ನರಸಿಂಹಮೂರ್ತಿ ಸೇರಿದಂತೆ ಗ್ರಾ.ಪಂ. ಸದಸ್ಯರು ಈ ವೇಳೆ ಹಾಜರಿದ್ದರು.

error: Content is protected !!