ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮಹಾರುದ್ರಯಾಗ

ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮಹಾರುದ್ರಯಾಗ

ಮಲೇಬೆನ್ನೂರು ಪಟ್ಟಣದ ಹೊರವಲಯ ದಲ್ಲಿರುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ  ಮಹಾರುದ್ರಯಾಗಕ್ಕೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ಇಷ್ಟಲಿಂಗ ಮಹಾಪೂಜೆಯನ್ನು ಮಾಡಲಿರುವ ರಂಭಾಪುರಿ ಶ್ರೀಗಳವರು, ಪೂಜೆಯ ನಂತರ ಆಶೀರ್ವಚನ ನೀಡಲಿದ್ದಾರೆ.ನಂತರ ಸಂಜೆ 4 ರಿಂದ ರಾತ್ರಿ 8 ರವರೆಗೆ ಮತ್ತು ನಾಳೆ ಶನಿವಾರ ಹಾಗೂ ದಿನಾಂಕ 12ರ ಭಾನುವಾರ ದಿನವಿಡೀ ಮಹಾರುದ್ರಯಾಗ ನಡೆಯಲಿದೆ. 

ಹೊನ್ನಾಳಿ ಹಿರೇಕಲ್ಮಠದ ಶ್ರೀಗಳು, ಕಡೇನಂದಿಹಳ್ಳಿ ಮಠದ ಶ್ರೀಗಳು, ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಶ್ರೀಗಳು ಭಾಗವಹಿಸಲಿದ್ದು, ವೇದ ಬ್ರಹ್ಮ ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಅಂಜನ ಪುರೋಹಿತರು ಈ ಮಹಾರುದ್ರ ಯಾಗವನ್ನು ನಡೆಸಿಕೊಡಲಿದ್ದಾರೆ.

3 ದಿನವೂ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಪ್ರಸಾದ, ಸಂಜೆ ಉಪಹಾರ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಇದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬಿ. ಚಿದಾನಂದಪ್ಪ ಕೋರಿದ್ದಾರೆ.

ಬಿ.ಉಮಾಶಂಕರ್, ಬಿ.ಮಲ್ಲಿಕಾರ್ಜುನ್, ಬಿ.ಶಂಭುಲಿಂಗಪ್ಪ, ಬಿ.ನಾಗೇಶಪ್ಪ, ಬಿ.ವಿ.ರುದ್ರೇಶ್, ಎಸ್.ಎನ್.ವಿಜಯಕುಮಾರ್, ಪ್ರಧಾನ ಅರ್ಚಕ ಬೆನಕಯ್ಯ ಶಾಸ್ತ್ರಿ, ಬೂದಿಸ್ವಾಮಿ ಶಾಸ್ತ್ರಿ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!