ಮಾಗನೂರು ಕಾಲೇಜಿನ ಪೂಜಾ ಜಿಲ್ಲೆಗೆ ಪ್ರಥಮ

ಮಾಗನೂರು ಕಾಲೇಜಿನ ಪೂಜಾ ಜಿಲ್ಲೆಗೆ ಪ್ರಥಮ - Janathavaniದಾವಣಗೆರೆ, ಏ. 21-  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ. ಪೂಜಾ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಗಳಿಸುವ ಮೂಲಕ ದಾವಣಗೆರೆ ಜಿಲ್ಲೆಗೆ ಪ್ರಥಮ  ಹಾಗೂ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ತೇಜು ಪಿ. 586 ಅಂಕಗಳನ್ನು ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನವನ್ನು, ಜಿ. ಅಮೀನ  583 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಎಂ.ಎಸ್. ರುದ್ರೇಶ್ 582, ಎಂ. ಸಾನ್ವಿ 581 ಮತ್ತು ಜಿ.ಆರ್. ಸೀಮಾ 580 ಅಂಕ ಪಡೆದಿರುತ್ತಾರೆ. 

ಕಾಲೇಜಿನಿಂದ 196 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 195 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  114 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 20 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ.

ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಗೌರವ ಕಾರ್ಯ ದರ್ಶಿ ಸಂಗಮೇಶ್ವರ ಗೌಡರು, ಕಾಲೇಜಿನ ನಿರ್ದೇಶಕ ಡಾ. ಜಿ.ಎನ್.ಹೆಚ್. ಕುಮಾರ್, ಪ್ರಾಚಾರ್ಯ ಡಾ. ಪ್ರಸಾದ್ ಬಂಗೇರ ಎಸ್.  ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 

error: Content is protected !!