ಖಾಸಗಿ ಬಸ್ ನಿಲ್ದಾಣ ಅವೈಜ್ಞಾನಿಕ: ಪ್ರತಿಭಟನೆ

ಖಾಸಗಿ ಬಸ್ ನಿಲ್ದಾಣ ಅವೈಜ್ಞಾನಿಕ: ಪ್ರತಿಭಟನೆ

ದಾವಣಗೆರೆ, ಮಾ.5 – ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ವಾಗಿರುವ ನೂತನ ಖಾಸಗಿ ಬಸ್ ನಿಲ್ದಾಣವು ಅವೈಜ್ಞಾನಿಕವಾಗಿದೆ ಎಂದು ವಿರೋಧಿಸಿ ಜಿಲ್ಲಾಡಳಿತದ ವಿರುದ್ಧ ಸಿಪಿಐ ಜಿಲ್ಲಾ ಮಂಡಳಿ ವತಿಯಿಂದ ಭಾನುವಾರ ನೂತನ ಖಾಸಗಿ ಬಸ್‌ ನಿಲ್ದಾಣದ ಬಳಿ ಇಂದು ಪ್ರತಿಭಟನೆ ಮಾಡಲಾಯಿತು.

ಮಹಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದಲ್ಲಿ 10 ಬಸ್‌ಗಳು ಕೂಡಾ ನಿಲ್ಲಲು ಅವಕಾಶವಿಲ್ಲದಷ್ಟು ಅವೈಜ್ಞಾನಿಕವಾಗಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ.

ನೂತನ ಬಸ್ ನಿಲ್ದಾಣಕ್ಕೆ ಪ್ರತಿದಿನ 100ಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. ಹಾಗಾಗಿ, ನವೀಕೃತಗೊಳಿಸಿ ನಿರ್ಮಿಸಿರುವ ನಿಲ್ದಾಣದಲ್ಲಿ ಜಾಗದ ಕೊರತೆ ಇದ್ದು, ಬಸ್ ನಿಲ್ದಾಣದ ಮುಂದೆ ಮುಖ್ಯ ರಸ್ತೆ ಇರುವುದರಿಂದ ಬಸ್‌ಗಳು ಒಳಹೋ ಗುವ ಹಾಗೂ ಹೊರಬರುವು ದರಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆಯಾಗುತ್ತದೆ ಎಂದರು.

ಬಸ್‌ ನಿಲ್ದಾಣ ನಿರ್ಮಾಣ ಸಂದರ್ಭ ದಲ್ಲಿ ರಸ್ತೆ ಕಡೆಗೆ ಸುಮಾರು 20 ಅಡಿ ಎತ್ತರದ ಜಿಂಕ್ ಶೀಟ್‌ಗಳನ್ನು ಅಡ್ಡಗಟ್ಟಿ ನಿರ್ಮಾಣ ಮಾಡಿದ್ದರಿಂದ ಒಳಗಡೆ ಯಾವ ರೀತಿ ಕಾಮಗಾರಿ ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಲಿಲ್ಲ. ಆದ್ದರಿಂದ, ನವೀಕೃತ ಖಾಸಗಿ ಬಸ್ ನಿಲ್ದಾಣವನ್ನು ನಗರ ಸಾರಿಗೆ ಬಸ್‌ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಮತ್ತು ನಗರದ ಬೇರೊಂದು ಕಡೆ ಸೂಕ್ತ ಸ್ಥಳ ಗುರುತಿಸಿ ವಿಶಾಲವಾದ ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು, ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹಕಾರ್ಯದರ್ಶಿ ಆವರಗೆರೆ ವಾಸು, ಐರಣಿ ಚಂದ್ರು, ಲಕ್ಷಣ.ವಿ, ಮೌನೇಶ ಚಾರ್, ಟಿ.ಎಸ್ ನಾಗರಾಜ, ಚಮನ್ ಸಾಬ್, ಕೃಷ್ಣಪ್ಪ, ಉಮಾಪತಿ, ಗದಿಗೇಶ್, ನರೇಗಾ ರಂಗನಾಥ್, ಏಳುಕೋಟಿ, ಬಸವರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!