ಗ್ರಾಮದೇವತೆ ಹಬ್ಬದಲ್ಲಿ ಪ್ರಾಣಿ ಬಲಿ ನಿಲ್ಲಬೇಕು : ರಟ್ಟಿಹಳ್ಳಿ ಶ್ರೀ

ಗ್ರಾಮದೇವತೆ ಹಬ್ಬದಲ್ಲಿ ಪ್ರಾಣಿ ಬಲಿ ನಿಲ್ಲಬೇಕು : ರಟ್ಟಿಹಳ್ಳಿ ಶ್ರೀ

ದೇವಸ್ಥಾನಗಳು ಗ್ರಾಮಕ್ಕೆ ಕಳಸವಿದ್ದಂತೆ : ನಂದಿಗುಡಿ ಶ್ರೀ

ಮಲೇಬೆನ್ನೂರು, ಏ.23- ಎಷ್ಟೇ ಬರಗಾಲವಿದ್ದರೂ ಜನರಲ್ಲಿ ಭಕ್ತಿಗೆ ಬರವಿಲ್ಲ ಎಂಬುದಕ್ಕೆ ಜಿಗಳಿ ಗ್ರಾಮಸ್ಥರು ಎರಡು ಹೊಸ ದೇವಸ್ಥಾನಗಳನ್ನು ಕಟ್ಟಿಸಿರುವುದೇ ಸಾಕ್ಷಿಯಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಗಳಿ ಗ್ರಾಮದಲ್ಲಿ ಮೊನ್ನೆ ಏರ್ಪಾಡಾಗಿದ್ದ ನೂತನವಾಗಿ ನಿರ್ಮಿಸಿರುವ ಶ್ರೀ ಕಲ್ಲೇಶ್ವರ ಮತ್ತು ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನಗಳ ಉದ್ಘಾಟನೆ ಮತ್ತು ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಗಳು ಆಶೀರ್ವಚನ ನೀಡಿದರು.

ಗ್ರಾಮದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಗ್ರಾಮದೇವತೆ ದೇವಸ್ಥಾನಗಳನ್ನು  ಎಲ್ಲಾ ಕಡೆ ನಿರ್ಮಿಸುತ್ತಾರೆ. ಗ್ರಾಮದೇವತೆ ಹೆಸರಿನಲ್ಲಿ ಆಚರಿಸುವ ಹಬ್ಬಗಳಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ನಿಲ್ಲಬೇಕು. ಹಬ್ಬಗಳಲ್ಲಿ ಯುವಕರು ಕುಡಿತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆಂದು ರಟ್ಟಿಹಳ್ಳಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಯಲವಟ್ಟಿಯ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಮಾತನಾಡಿ, ಪ್ರಕೃತಿ ಮನುಕುಲಕ್ಕೆ ಪರೋಪಕಾರ ಮಾಡುತ್ತಿದೆ. ಅದರ ಉಪಕಾರ ಪಡೆದ ಯುವಕರು ಸ್ವಾರ್ಥಿಗಳಾಗಿದ್ದಾರೆ. ದಾನ-ಧರ್ಮದ ಕಾರ್ಯಗಳು ಬದುಕಿನಲ್ಲಿ ಬರುವ ದುಃಖ-ಕಷ್ಟಗಳನ್ನು ದೂರ ಮಾಡುತ್ತವೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳು ಗ್ರಾಮಕ್ಕೆ ಕಳಸವಿದ್ದಂತೆ. ದೇವಸ್ಥಾನಗಳಿಂದ ಗ್ರಾಮದ ಭಕ್ತಿ-ಭಾವ  ಬೆಳೆಯುತ್ತದೆ ಎಂದರು.

ಗ್ರಾಮದ ಮುಖಂಡರಾದ ಗೌಡ್ರ ಬಸವರಾಜಪ್ಪ, ಬಿ.ಎಂ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯ ವೈದ್ಯ  ಡಾ. ಟಿ.ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿದರು.

ಉಡುಸಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಜಾಗವನ್ನು ದಾನವಾಗಿ ನೀಡಿದ ನಾಗರಾಜಯ್ಯ, ಚಂದ್ರಯ್ಯ ಸಹೋದರರನ್ನು ಹಾಗೂ ಚಿಂದಿಗೌಡ್ರ ಮಹೇಶ್ವರಪ್ಪ, ಪ್ರಕಾಶ್ ಮತ್ತು ಕಳಸ ದಾನಿಗಳಾದ ಶಿಕ್ಷಕ ಜಿ.ಆರ್.ನಾಗರಾಜ್, ಕಾಯಕದ ಮಲ್ಲಪ್ಪ ಹಾಗೂ ಧರ್ಮಸ್ಥಳ ಯೋಜನಾಧಿಕಾರಿ ವಸಂತ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಲೋಕಸಭಾ ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ.ನಾಗೇಂದ್ರಪ್ಪ, ಜಿ.ಮಂಜುನಾಥ್ ಪಟೇಲ್, ನಿಖಿಲ್ ಕೊಂಡಜ್ಜಿ, ಸಿರಿಗೆರೆ ರಾಜಣ್ಣ, ಹನಗವಾಡಿ ಕುಮಾರ್, ಗುತ್ತೂರು ಹಾಲೇಶ್‌ಗೌಡ, ಬಿ.ವೀರಯ್ಯ, ಕೆ.ಪಿ.ಗಂಗಾಧರ್, ತಾ. ಜೆಡಿಎಸ್ ಅಧ್ಯಕ್ಷ ಹಳ್ಳಿಹಾಳ್ ಪರಮೇಶ್ವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ಅಬೀದ್ ಅಲಿ, ಎಲ್ ಬಿ ಹನುಮಂತಪ್ಪ, ಕೊಕ್ಕನೂರು ಆಂಜನೇಯ ಪಾಟೀಲ್, ಕುಂಬಳೂರು ವಾಸು, ದಾವಣಗೆರೆ ತಾ ಪಂ ಮಾಜಿ ಅಧ್ಯಕ್ಷ ಕುಕ್ಕುವಾಡದ ಕೆ.ಎನ್.ಮಂಜುನಾಥ್, ತಿಮ್ಮೇನಹಳ್ಳಿ ರಾಜಣ್ಣ, ಬೇವಿನಹಳ್ಳಿ ಶ್ರೀಕಾಂತ್, ಬಿ.ಕೆ.ಮಹೇಶ್ವರಪ್ಪ, ಗ್ರಾಮದ ನಾಗಸನಹಳ್ಳಿ ಮಹೇಶ್ವರಪ್ಪ, ಬಿ.ಸೋಮಶೇಖರ ಚಾರಿ, ಮಠದ ಹಾಲಯ್ಯ, ಬಿಳಸನೂರು ಚಂದ್ರಪ್ಪ, ಕೆ.ಆರ್. ರಂಗಪ್ಪ, ಡಿ.ಆರ್.ಮಧುಸೂದನ್, ಪೂಜಾರ್ ಮೂಕಪ್ಪ, ಕೆ.ಷಣ್ಮುಖಪ್ಪ, ಹೆಚ್.ಟಿ.ರಂಗನಾಥ್, ಸೋಮಚಂದ್ರಣ್ಣರ ಬಸವರಾಜ್, ಕೆ.ಎಸ್.ನಂದ್ಯಪ್ಪ, ಕ್ಯಾಂಪ್ ಸಿದ್ದಪ್ಪ, ಮುದ್ದಪ್ಳ ಶಂಕ್ರಪ್ಪ, ಬನ್ನಿಕೋಡು ನಾಗರಾಜ್, ಡಾ. ಎನ್.ನಾಗರಾಜ್, ಡಿ.ಎಂ.ಹರೀಶ್, ಕೆ.ಜಿ.ಬಸವರಾಜ್, ಮಾಕನೂರು ಶಿವು, ಬೆಣ್ಣೇರ ನಂದ್ಯಪ್ಪ, ಭೋವಿ ಮಂಜಣ್ಣ, ಬಾರಿಕೆರ ಕೃಷ್ಣ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ನಂದಿಗುಡಿ ಮಠದ ವಟುಗಳಿಂದ ಶ್ರೀ ಕಲ್ಲೇಶ್ವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಮಲೇಬೆನ್ನೂರಿನ ಶ್ಯಾಮಸುಂದರ್ ಜೋಯ್ಸ್, ಎಂ.ಡಿ.ಮುರುಳೀ ಧರ್ ರಾವ್ ಸಂಗಡಿಗರಿಂದ ಶ್ರೀ ಉಡುಸಲಮ್ಮ ದೇವಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.

error: Content is protected !!