ಕಾಂಗ್ರೆಸ್ ಅಭ್ಯರ್ಥಿಯಿಂದ ನಾಳೆ ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶಿಸಲು ಹರಿಹರ ತಾ. ಕಾಂಗ್ರೆಸ್ ನಿರ್ಧಾರ

ಕಾಂಗ್ರೆಸ್ ಅಭ್ಯರ್ಥಿಯಿಂದ ನಾಳೆ ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶಿಸಲು ಹರಿಹರ ತಾ. ಕಾಂಗ್ರೆಸ್ ನಿರ್ಧಾರ

ಹರಿಹರ, ಏ.16-  ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ನಾಳೆ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ಈ ಕಾರ್ಯಕ್ರಮದಲ್ಲಿ ಹರಿಹರ ತಾಲ್ಲೂಕಿನಿಂದ ಸಹಸ್ರ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಮಾಜಿ ಶಾಸಕ ಎಸ್‌.ರಾಮಪ್ಪ ಹಾಗೂ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಜಂಟಿಯಾಗಿ ಹೇಳಿದರು.

ನಗರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನಾಮಪತ್ರ ಸಲ್ಲಿಸುವ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲು ಐದು ಜನ ಪ್ರಮುಖರಿಗೆ ಜವಾಬ್ದಾರಿ ನೀಡಲಾಗಿದೆ.ಆದ್ದರಿಂದ ಅವರ ಮಾರ್ಗದರ್ಶನದಲ್ಲಿ ಪಕ್ಷದ ಮುಖಂಡರೆಲ್ಲರೂ ಸಮ್ಮತಿಸೋಣ ಎಂದು ಹೇಳಿದರು.

ಜಿಲ್ಲಾ ಕೇಂದ್ರ ಹತ್ತಿರವಿರುವ ಕಾರಣ ಬಸ್‌ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ ಬೂತ್‌ ಮಟ್ಟದಲ್ಲಿ ಲಘು ವಾಹನ ವ್ಯವಸ್ಥೆ ಇದ್ದು, ಪ್ರತಿ ಬೂತ್‌ನಿಂದ 100ಕ್ಕೂ ಹೆಚ್ಚಿನ ಜನ, ಪಕ್ಕೀರಸ್ವಾಮಿ ಮಠದ ಬಳಿ ಸೇರಿದರೆ ಅಲ್ಲಿಂದ ನಾಮಪತ್ರ ಸಲ್ಲಿಸುವ ಸ್ಥಳಕ್ಕೆ ಹೋಗಬಹುದು ಎಂದು ತಿಳಿಸಿದರು.

ಪಕ್ಷದ ಮುಖಂಡ ಎಂ. ನಾಗೇಂದ್ರಪ್ಪ ಮಾತನಾಡಿ, ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಸದಸ್ಯರೆಲ್ಲರೂ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನೂ ಸಹ ಬೆಳ್ಳೂಡಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗರು ಬರಲು ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ನಿಖಿಲ್‌ ಕೊಂಡಜ್ಜಿ ಮಾತನಾಡಿ, ಪ್ರತಿ ಗ್ರಾಮದಿಂದಲೂ ಜನ ಬರುವಂತೆ ಕಾರ್ಯಕರ್ತರು ಗಮನ ವಹಿಸಬೇಕು. ಬಿಜೆಪಿ ಪಕ್ಷಕ್ಕೆ ಸೋಲಿನ ಭಯ ಕಾಡುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ನಾಮಪತ್ರ ಸಲ್ಲಿಸಬೇಕು ಎಂದರು.

ಮಾಜಿ ತಾ.ಪಂ ಸದಸ್ಯರಾದ ಗುತ್ತೂರಿನ ಜಿ.ಬಿ ಹಾಲೇಶ್‌ಗೌಡ್ರು ಮಾತನಾಡಿ,  ತಾಲ್ಲೂಕಿನಿಂದ ಕನಿಷ್ಠ 25 ಸಾವಿರ ಜನರನ್ನು ಸೇರಿಸೋಣ. ಹೆಚ್ಚು ಮತಗಳಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ತಾಲ್ಲೂಕು ಅಭಿವೃದ್ಧಿಗೊಳಿಸುವುದಕ್ಕೆ ಸಹಾಯಕವಾಗಲಿದೆ ಎಂದು ಹೇಳಿದರು.

ಈ ವೇಳೆ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್,  ಕೆ.ಜಿ. ಸಿದ್ದೇಶ್,
ಎ.ಬಿ. ವಿಜಯಕುಮಾರ್, ಬಾಬುಲಾಲ್, ಅಬ್ದುಲ್ ಅಲಿಂ, ನಾಗರತ್ನ, ಸುಮಿತ್ರಾ,
ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ಸಿರಿಗೆರೆ ರಾಜಣ್ಣ,
ಕೆ.ಜಡಿಯಪ್ಪ, ಸುರೇಶ್ ಹಾದಿಮನಿ, ಟಿ.ಜೆ ಮುರುಗೇಶಪ್ಪ, ಕುಂಬಳೂರು ವೀರೂಪಾಕ್ಷಪ್ಪ,  ಜಿ.ಪಂ ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಮಾಜಿ ನಗರಸಭೆ ಅಧ್ಯಕ್ಷ ಕೃಷ್ಣಸಾ ಭೂತೆ, ವೈ.ಎನ್. ಮಹೇಶ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ,  ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ, ಸಿ.ಎನ್. ಹುಲುಗೇಶ್,  ಅಮರಾವತಿ ರೇವಣಸಿದ್ದಪ್ಪ, ವಕೀಲ ಸಿದ್ದನಗೌಡ, ಯಲವಟ್ಟಿ ಮಲ್ಲಿಕಾರ್ಜುನಪ್ಪ, ಎಂ.ಬಿ. ಅಭಿದಾಲಿ,  ಮಂಜುನಾಥ್ ಪಾಟೀಲ್ ಕುಮಾರನಹಳ್ಳಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ನರೇಂದ್ರ ಬೆಳ್ಳೂಡಿ, ಗೋವಿನಾಳ ರಾಜಣ್ಣ,    ಅಶೋಕ ಮಾಸ್ಟರ್, ಬಸವರಾಜ್ ಹಲಸಬಾಳು, ಏಜಾಜ್ ಅಹ್ಮದ್, ಮಲೇಬೆನ್ನೂರು ಕೆ.ಪಿ. ಗಂಗಾಧರ್, ಸಂತೋಷ ನೋಟದರ್,  ಕೆ.ಬಿ. ರಾಜಶೇಖರ್, ಸಂತೋಷ್ ದೊಡ್ಡಮನೆ,  ಮುನಾಫ್, ಅರ್ಜುನ್ ಪವರ್, ವಿಜಯಕುಮಾರ್, ರೆಹಮಾನ್ ಸಾಬ್, ನಾಗೇಂದ್ರಪ್ಪ ರಾಜನಹಳ್ಳಿ, ಹನುಮಂತಪ್ಪ ಕತ್ವಾಲ್, ಶಶಿರೆಡ್ಡಿ ಬಿಳಸನೂರು, ವೈ. ರಘುಪತಿ, ಮಧುಸೂದನ್, ಭರತ್,  ರಾಘವೇಂದ್ರ ಕೊಂಡಜ್ಜಿ, ಆನಂದ್ ವಕೀಲ, ತಿಪ್ಪೇಸ್ವಾಮಿ,  ಗೌಡ್ರು ಮಂಜುನಾಥ್ ಜೋಸೆಫ್ ದಿವಾಕರ್, ಇಮ್ಮುರಾಜ್, ಪ್ರಭು ಕಕ್ಕರಗೊಳ್ಳ, ನಾಗರಾಜ್ ಕುಡುಪಲಿ ರಾಣೇಬೆನ್ನೂರು, ಪ್ರವೀಣ್, ನಜೀರ್ ಹುಸೇನ್,  ಅಶೋಕ್ ಭೂತೆ, ಸಾಧಿಕ್ ಸಾಬ್ ಮಲೇಬೆನ್ನೂರು ಇದ್ದರು.

error: Content is protected !!