ಚನ್ನಗಿರಿ ತಾ.ನಲ್ಲಿ ಇಂದಿನಿಂದ `ವಿನಯ ನಡಿಗೆ ಹಳ್ಳಿ ಕಡೆಗೆ’ ಪಾದಯಾತ್ರೆ

ಚನ್ನಗಿರಿ ತಾ.ನಲ್ಲಿ ಇಂದಿನಿಂದ  `ವಿನಯ ನಡಿಗೆ ಹಳ್ಳಿ ಕಡೆಗೆ’ ಪಾದಯಾತ್ರೆ

ಚನ್ನಗಿರಿ, ಜ.8- ನಾಳೆ ದಿನಾಂಕ 9ನೇ ಮಂಗಳವಾರದಿಂದ  ಚನ್ನಗಿರಿ ತಾಲ್ಲೂಕಿನ ಹಾಲೇಶಪುರದಿಂದ `ವಿನಯ ನಡಿಗೆ, ಹಳ್ಳಿ ಕಡೆಗೆ’ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಜಿ.ಬಿ. ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆ, ಜನರಲ್ಲಿ ಪಕ್ಷದ ಯೋಜನೆಗಳ ಕುರಿತು ಅರಿವು ಮೂಡಿಸುವುದು ಸೇರಿದಂತೆ, ಕಾರ್ಯಕ್ರಮಗಳ ಜೊತೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಐದು ದಿನಗಳ ಕಾಲ ಪ್ರತಿದಿನ 10 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಒಂದು ದಿನಕ್ಕೆ 25 ಕಿ.ಮೀ.  ಪಾದಯಾತ್ರೆ ನಡೆಸಲಾಗುತ್ತದೆ ಎಂದರು. 

ಮಾವಿನಕಟ್ಟೆ, ರಾಜಗೊಂಡನಹಳ್ಳಿ, ಮಲಹಾಳ್, ನೀತಿಗೆರೆ ತಾಂಡಾ, ಹಿರೇಕೋಗಲೂರು, ಕಾಶಿಪುರ ಕ್ಯಾಂಪ್ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುತ್ತದೆ ಎಂದರು.  ವಿನಯ ಮಾರ್ಗ ಟ್ರಸ್ಟ್‌ನಿಂದ ಡಿಸೆಂಬರ್ 18ರಿಂದ ಪ್ರಾರಂಭಗೊಂಡಿದ್ದು, ಜನವರಿ 14ರ ವರೆಗೆ 25 ದಿನಗಳ ಕಾಲ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ `ವಿನಯ ನಡಿಗೆ ಹಳ್ಳಿ ಕಡೆಗೆ’  ಪಾದಯಾತ್ರೆ ನಡೆಸಲಾಗುತ್ತಿದೆ. ಈಗಾಗಲೇ ಜಗಳೂರು, ಹರಪನಹಳ್ಳಿ, ಹರಿಹರ, ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ಗ್ರಾಮಗಳಲ್ಲಿ ಪಾದಯಾತ್ರೆ ಮಾಡಲಾಗಿದೆ. ಪಾದಯಾತ್ರೆ  ಮಾಡುವಂತಹ ಗ್ರಾಮಗಳಲ್ಲಿ ಪಕ್ಷದ ಮುಖಂಡರು, ರೈತರು, ಮಹಿಳೆಯರು, ಶಾಲಾ ಮಕ್ಕಳು, ಜೊತೆಗೂಡಿ ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಜಿ.ಪಂ. ಮಾಜಿ ಸದಸ್ಯ  ಕೃಷ್ಣಮೂರ್ತಿ.    ಅಣ್ಣಪ್ಪ ಹಾಲೇಶ್, ತಿಪ್ಪೇಶ್, ರುದ್ರೇಗೌಡ, ಶರತ್ ಕುಮಾರ್, ರಂಗಸ್ವಾಮಿ ಇದ್ದರು.

error: Content is protected !!