25 ಪಾಸಿಟಿವ್, 11 ಬಿಡುಗಡೆ

ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 142ಕ್ಕೆ ಏರಿಕೆ

ದಾವಣಗೆರೆ, ಜು. 16 – ಜಿಲ್ಲೆಯಲ್ಲಿ ಗುರುವಾರ 25 ಕೊರೊನಾ ಪ್ರಕರಣಗಳು ಕಾಣಿಸಿ ಕೊಂಡಿದ್ದು, ಇದೇ ದಿನ 11 ಜನ ಗುಣಮುಖರಾಗಿ ಬಿಡುಗಡೆಯಾಗಿ ದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

ಗುರುವಾರ ಕಂಡುಬಂದ ಸೋಂಕಿತರಲ್ಲಿ 19 ಜನ ದಾವಣಗೆರೆ ತಾಲ್ಲೂಕಿನವರು, ಮೂವರು ಹರಿಹರ, ಒಬ್ಬರು ಹೊನ್ನಾಳಿ ಹಾಗೂ ಇನ್ನಿಬ್ಬರು ಹೊರ ಜಿಲ್ಲೆಯವರು.

ಬಿಡುಗಡೆಯಾದವರಲ್ಲಿ ಎಂಟು ಜನ ದಾವಣಗೆರೆ ಹಾಗೂ ಮೂವರು ಹರಿಹರದವರು.

ದಾವಣಗೆರೆಯ ಕಾಯಿಪೇಟೆಯ 19 ವರ್ಷದ ಪುರುಷ ಫ್ಲುದಿಂದ ಬಳಲುತ್ತಿದ್ದು ಅವರಲ್ಲಿ ಸೋಂಕು ಕಂಡು ಬಂದಿದೆ. ಶೇಖರಪ್ಪ ನಗರದ 24 ವರ್ಷದ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್‌ನ 25 ವರ್ಷದ ಮಹಿಳೆ, ಬಿ.ಟಿ. ಲೇಔಟ್‌ನ 41 ವರ್ಷದ ವ್ಯಕ್ತಿ, ಕುರುಬರಕೇರಿಯ 67 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ದಾವಣಗೆರೆ ಜುಬ್ಲಿಬಾವಿ ರಸ್ತೆಯ 52 ವರ್ಷದ ಮಹಿಳೆ, 56 ವರ್ಷದ ಪುರುಷನಿಗೆ ಸಂಪರ್ಕದ ಕಾರಣದಿಂದ ಸೋಂಕು ಬಂದಿದೆ. ಹಾಸಬಾವಿ ಸರ್ಕಲ್‌ನ 35 ವರ್ಷದ ಫ್ಲು ಹೊಂದಿದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. 

ಆಂಜನೇಯ ಬಡಾವಣೆಯ 63 ವರ್ಷದ ಫ್ಲು ಹೊಂದಿದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ಕೆ.ಬಿ. ಬಡಾವಣೆಯ 56 ವರ್ಷದ ಫ್ಲು ಇರುವ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. 

ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನ 28 ವರ್ಷದ ಮಹಿಳೆಗೆ ಸೋಂಕಿರುವುದು ಪತ್ತೆಯಾಗಿದೆ. ಡಿ.ಸಿ.ಎಂ. ಲೇಔಟ್‌ನ 56 ವರ್ಷದ ಫ್ಲು ಹೊಂದಿರುವ ಮಹಿಳೆ, ಹೆಚ್.ಕೆ.ಆರ್. ನಗರದ 40 ವರ್ಷದ ಫ್ಲು ಹೊಂದಿದ ವ್ಯಕ್ತಿ, ಸರಸ್ವತಿ ನಗರದ 35 ವರ್ಷದ ಫ್ಲು ಹೊಂದಿದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ಡಿಸಿಎಂ ಲೇಔಟ್‌ನ 65 ವರ್ಷದ ವ್ಯಕ್ತಿ ಹಾಗೂ ಆನೆಕೊಂಡದ 60 ವರ್ಷದ ವ್ಯಕ್ತಿಯಲ್ಲಿ ಫ್ಲು ಇದ್ದು, ಅವರಲ್ಲಿ ಸೋಂಕು ಪತ್ತೆಯಾಗಿದೆ. ನಗರದ ಮುಸ್ತಫಾ ನಗರದ 54 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟದ ಪ್ರಯಾಣದ ಹಿನ್ನೆಲೆಯ 26 ವರ್ಷದ ವ್ಯಕ್ತಿ, ದೊಡ್ಡಬಾತಿಯ 64 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಹರಿಹರದ ಗೌಸಿಯಾ ಕಾಲೋನಿಯ 29 ವರ್ಷದ ವ್ಯಕ್ತಿಗೆ ಸಂಪರ್ಕದ ಕಾರಣದಿಂದ ಸೋಂಕು ಬಂದಿದೆ. ಹರಿಹರದ ವಿನಾಯಕ ನಗರದ 22 ವರ್ಷದ ಪುರುಷನಲ್ಲಿ ಸಂಪರ್ಕದಿಂದ ಸೋಂಕು ಬಂದಿದೆ. ಭಾರತ್ ಆಯಿಲ್ ಮಿಲ್ ಕಾಂಪೌಡ್‌ನ 65 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಹೊನ್ನಾಳಿ ತಾಲ್ಲೂಕಿನ ಗೊಂದಿ ಚಟ್ನಹಳ್ಳಿಯ 22 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಹುಬ್ಬಳ್ಳಿಯಿಂದ ಜಿಲ್ಲೆಗೆ ಬಂದಿದ್ದ 61 ವರ್ಷದ ಫ್ಲು ಹೊಂದಿದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಮ್ಮತ್ತಹಳ್ಳಿಯ 40 ವರ್ಷದ ಫ್ಲು ಹೊಂದಿದ ವ್ಯಕ್ತಿಯಲ್ಲಿ ಸೋಂಕಿರುವುದು ಕಂಡು ಬಂದಿದೆ.

ಇದೇ ದಿನ ಹನ್ನೊಂದು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ದಾವಣಗೆರೆಯ ಭಗತ್ ಸಿಂಗ್ ನಗರದ 49 ವರ್ಷದ ವ್ಯಕ್ತಿ, ಇಸ್ಮಾಯಿಲ್ ನಗರದ 38 ವರ್ಷದ ಮಹಿಳೆ, ಬೇತೂರು ರಸ್ತೆಯ 30 ವರ್ಷದ ವ್ಯಕ್ತಿ, ಎಂಸಿಸಿ ಬಿ ಬ್ಲಾಕ್‌ನ 27 ವರ್ಷದ ಮಹಿಳೆ ಹಾಗೂ ಒಂದು ವರ್ಷದ ಹೆಣ್ಣು ಮಗು, ಕೆ.ಟಿ.ಜೆ. ನಗರದ 22 ವರ್ಷದ ವ್ಯಕ್ತಿ ಹಾಗೂ 10 ವರ್ಷದ ಬಾಲಕ ಮತ್ತು 43 ವರ್ಷದ ಮಹಿಳೆ ಸೇರಿದ್ದಾರೆ.

ಹರಿಹರದ ಟಿಪ್ಪು ನಗರದ 32 ವರ್ಷದ ಮಹಿಳೆ, ವಿದ್ಯಾನಗರದ 30 ವರ್ಷದ ಮಹಿಳೆ, ಹರಿಹರ ತಾಲ್ಲೂಕಿನ ಕೊಂಡಜ್ಜಿಯ 24 ವರ್ಷದ ವ್ಯಕ್ತಿ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ 658 ಸೋಂಕು ಪ್ರಕರಣಗಳು ಕಂಡು ಬಂದಿವೆ. ಇವರಲ್ಲಿ 494 ಜನರು ಇದುವರೆಗೂ ಗುಣಮುಖರಾಗಿ ಬಿಡುಗಡೆಯಾಗಿದ್ದರೆ. 22 ಜನರು ಸಾವನ್ನಪ್ಪಿದ್ದಾರೆ.

error: Content is protected !!