ಹೆಚ್ಚುತ್ತಿರುವ ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಪ್ರಕರಣಗಳು : ನಾಗರಿಕರು ಎಚ್ಚರಿಕೆ ವಹಿಸಲಿ

ಜಗಳೂರು, ಜು.16- ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗ್ರಾಹಕರನ್ನು  ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೈಬರ್ ಕ್ರೈಂ ಪೋಲಿಸ್ ಠಾಣೆಯ ಸಿಪಿಐ ಮುಸ್ತಾಕ್ ಅಹಮದ್ ತಿಳಿಸಿದರು.  

ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ  ಸೈಬರ್ ಕ್ರೈಂ ಬಗ್ಗೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ  ಮಾತನಾಡಿದ ಅವರು, ಕಷ್ಟ ಪಟ್ಟು ದುಡಿದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದರೆ ಸೈಬರ್ ಕ್ರೈಂ 
ಬಗ್ಗೆ ಅರಿವು ಹೊಂದಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ನಾವು ಬ್ಯಾಂಕ್ ಅಧಿಕಾರಿಗಳೆಂದು  ಹೇಳಿ ಬರುವ ಅಪರಿಚಿತ ಕರೆಗಳ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಖಾತೆಯ ಮಾಹಿತಿಗಾಗಿ  ನಿಮ್ಮ ಬ್ಯಾಂಕಿಗೆ ಹೋಗಿ ವಿಚಾರಿಸಿ. ಕರೆಗಳಿಗೆ ಕಿವಿಗೊಡಬೇಡಿ. ಸಾಲ ಕೊಡುವ ಸೋಗಿನಲ್ಲಿ ವಂಚನೆ ಮಾಡುವವರು ಇದ್ದಾರೆ ಎಂದರು.

ನಿಮಗೆ ಬಹುಮಾನ ಬಂದಿದೆ  ಇದನ್ನು ಪಡೆ ಯಲು ನೀವು ಟ್ಯಾಕ್ಸ್ ಕಟ್ಟಬೇಕಾಗುತ್ತದೆ.  ನಮ್ಮ ಖಾತೆಗಳಿಗೆ ಹಣ ಹಾಕಿ ಎಂದು  ಮೋಸ ಮಾಡು ವವರಿದ್ದಾರೆ. ಅಂತವರ ಬಗ್ಗೆ  ಪೊಲೀಸ್ ಇಲಾ ಖೆಯ ಗಮನಕ್ಕೆ ತನ್ನಿ. ಸರಕಾರಿ, ಖಾಸಗಿ ಕಂಪನಿ ಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸು ವವರನ್ನು ನಂಬ ಬೇಡಿ ಎಂದು  ಹೇಳಿದರು.

ಈ ಸಂದರ್ಭದಲ್ಲಿ  ಸಿಬ್ಬಂದಿಗಳಾದ  ಸೋಮಶೇಖರ್ , ಮಂಜುನಾಥ್, ಲೋಹಿತ್  ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!