ಅಣಜಿಯಲ್ಲಿ ನಾಡಿದ್ದು ಕೆರೆ ಹೊನ್ನಮ್ಮ ದೇವಿಯ ದೊಡ್ಡ ಜಾತ್ರೆ

ಅಣಜಿಯಲ್ಲಿ ನಾಡಿದ್ದು ಕೆರೆ ಹೊನ್ನಮ್ಮ ದೇವಿಯ ದೊಡ್ಡ ಜಾತ್ರೆ - Janathavaniದಾವಣಗೆರೆ, ಮಾ.8- ತಾಲ್ಲೂಕಿನ ಅಣಜಿ ಗ್ರಾಮದಲ್ಲಿ ಇದೇ ದಿನಾಂಕ 11 ರಿಂದ 13 ರವರೆಗೆ ಶ್ರೀ ಕೆರೆ ಹೊನ್ನಮ್ಮ ದೇವಿಯ ದೊಡ್ಡಜಾತ್ರೆ ಹಾಗೂ ಭಾರೀ ಜಂಗೀ ಕುಸ್ತಿಗಳು ನಡೆಯಲಿವೆ.

ದಿನಾಂಕ 11 ರಂದು ಬೆಳಿಗ್ಗೆ 8 ಗಂಟೆಯಿಂದ ಗ್ರಾಮದಲ್ಲಿ ಅಮ್ಮನವರ ದೇವಸ್ಥಾನದಿಂದ ಕೇಲುಗಳನ್ನು ನಡೆ ಮುಡಿಯಿಂದ ಉತ್ಸವ ಮತ್ತು ಭಾಜಾ ಭಜಂತ್ರಿಯಿಂದ ಕೆರೆಗೆ ಕರೆದೊಯ್ಯಲಾಗುವುದು. 

ನಂತರ ಮಧ್ಯಾಹ್ನ 2.30 ಕ್ಕೆ ದೇವಸ್ಥಾನದ ಆವರಣದಲ್ಲಿ ಭಾರೀ ಜಂಗೀ ಕುಸ್ತಿಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.

ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಪ್ರೊ. ಎನ್. ಲಿಂಗಣ್ಣ ಅಧ್ಯಕ್ಷತೆ ವಹಿಸಲಿದ್ದು, ಶಾಸಕ  ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಜಿಲ್ಲಾ ವರಿಷ್ಠಾಧಿಕಾರಿ  ಸಿ.ಬಿ. ರಿಷ್ಯಂತ್, ಅಣಜಿ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ದೇವೇಂದ್ರಪ್ಪ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಶ್ರೀ ಕೆರೆ ಹೊನ್ನಮ್ಮ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಎನ್. ಪ್ರಕಾಶ್ ಪಟೇಲ್ ಭಾಗವಹಿಸಲಿದ್ದಾರೆ.

ದಿನಾಂಕ 12 ರಂದು ಅಮ್ಮನವರಿಗೆ ಅಭಿಷೇಕ, ಪೂಜೆ, ಭಕ್ತಾದಿಗಳಿಂದ ಹಣ್ಣು-ಕಾಯಿ, ಎಡೆ ಸಮರ್ಪಣೆ, ಬೆಳಿಗ್ಗೆ 10 ರಿಂದ 12.30 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 6.30 ರವರೆಗೆ ಭಾರೀ ಜಂಗೀ ಕುಸ್ತಿಗಳು ನಡೆಯಲಿವೆ.

ರಾತ್ರಿ 9.30 ರಿಂದ ಶ್ರೀ ದಿಗಂಬರೇಶ್ವರ ಸಂಗೀತ ನಾಟಕ ಮಂಡಳಿ  ಅಣಜಿ ಇವರಿಂದ `ಶ್ರೀ ಶಿವಶರಣೆ ಕೆರೆ ಹೊನ್ನಮ್ಮ’ ಐತಿಹಾಸಿಕ ನಾಟಕ ಪ್ರದರ್ಶನ ಇರುತ್ತದೆ.

ಮಾ. 13 ರಂದು ಮೂರನೇ ದಿನದ ಕಾರ್ಯ ಕ್ರಮಗಳು ಜರುಗಲಿದ್ದು, ಬೆಳಿಗ್ಗೆ 10 ಗಂಟೆಯಿಂದ 12.30 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ 6.30 ರವರೆಗೆ ಭಾರೀ ಜಂಗೀ ಕುಸ್ತಿಗಳು ನಡೆಯಲಿವೆ.

ಮಧ್ಯಾಹ್ನ 3 ಗಂಟೆಗೆ ಕುಸ್ತಿಗಳ ಸಮಾರೋಪ ಸಮಾರಂಭ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ ಬಹುಮಾನ ವಿತರಣೆ ಮಾಡಲಿದ್ದಾರೆ.

 ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮೇಯರ್ ವಿನಾಯಕ ಪೈಲ್ವಾನ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ. ಶೇಖರಪ್ಪ, ಕೋಶಾಧ್ಯಕ್ಷಷ ಕೆ. ಗುಡ್ಡೇಶ್  ಮತ್ತಿತರರು ಭಾಗವಹಿಸಲಿದ್ದಾರೆ. 

error: Content is protected !!