ಜಿಎಂಐಟಿಯಲ್ಲಿ ಎಕ್ಸೋಟಿಕ್-20 ಫೋರಂ ಉದ್ಘಾಟನೆ

ದಾವಣಗೆರೆ, ನ.18- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಇನ್‌ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಕ್ಸೋಟಿಕ್-20 ಫೋರಂ ಉದ್ಘಾಟನಾ ಸಮಾರಂಭ ಹಾಗೂ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಮೈಕ್ರೋಸಾಫ್ಟ್ ಟೀಮ್ಸ್ ಅಪ್ಲಿಕೇಷನ್ ಮುಖಾಂತರ ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಫೌಂಡರ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಬಿಪಿಎ ಲ್ಯಾಬ್ಸ್ ಝೆಕ್ ರಿಪಬ್ಲಿಕ್‌ನ ಶೋಭಾ ಪಾಟೀಲ್ ಆಗಮಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿಭಾಗದ ಮುಖ್ಯಸ್ಥರು ಹಾಗೂ ಡೀನ್ ಅಕ್ಯಾಡೆಮಿಕ್ ಡಾ. ಬಿ.ಎಸ್. ಸುನೀಲ್‌ಕುಮಾರ್ ಉದ್ಘಾಟನೆ ನೆರವೇರಿಸಿದರು.  ಇದೇ ವೇಳೆ ಐಎಸ್‌ಇ ವಿಭಾಗದ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಲಾಯಿತು. ಇನ್‌ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ವಾರ್ಷಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆಯನ್ನು  ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ವಹಿಸಿ ಮಾತನಾಡಿದರು.

ವಿಭಾಗದ ವಿದ್ಯಾರ್ಥಿನಿ ಜಿ.ಬಿ. ಹರ್ಷಿತಾ ಪ್ರಾರ್ಥಿಸಿದರು. ರಂಜಿತಾ ಸ್ವಾಗತಿಸಿದರು. ವಿ. ನಂದನಾ ಫೋರಂನ ಮಾಹಿತಿ ನೀಡಿದರು. ಕೆ.ಎಸ್. ವರ್ಷಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸಹನಾ ರಾಣೆ ವಂದಿಸಿದರು. ಸೃಷ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಫೋರಂ ಸಂಯೋಜಕ ಇಮ್ರಾನ್ ಖಾನ್, ಖಜಾಂಚಿ ಡಾ. ಎಸ್. ನೀಲಾಂಬಿಕೆ, ಫೋರಂನ ಉಪಾಧ್ಯಕ್ಷ ವಿದ್ಯಾರ್ಥಿನಿ ವಿ. ವಂದನಾ, ಕಾರ್ಯದರ್ಶಿ ಕೆ.ಎಸ್. ವರ್ಷಾ, ಖಜಾಂಚಿ ಎ. ನಹಾಲ್ ಹಾಗೂ ವಿಭಾಗದ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!