ಪಿಯುಸಿ: ಅನ್‌ಮೋಲ್ ವಿಜ್ಞಾನ ಕಾಲೇಜಿಗೆ ಶೇ. 100 ಫಲಿತಾಂಶ

ದಾವಣಗೆರೆ, ಏ.17- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಹೊರವಲಯದ ಅನ್‌ಮೋಲ್ ವಿಜ್ಞಾನ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ.  ಪಿ. ಶ್ರೇಯಸ್  600 ಕ್ಕೆ 586 ಅಂಕ ಗಳಿಸಿದ್ದಾನೆ.  

ಒಟ್ಟು 132 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 75 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌,  56 ಪ್ರಥಮ ದರ್ಜೆ ಮತ್ತು ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕಾಲೇಜ್ ಸತತವಾಗಿ 2ನೇ ಬಾರಿಯೂ ಶೇಕಡ ನೂರು ಫಲಿತಾಂಶವನ್ನು ಕಾಯ್ದುಕೊಂಡಿದೆ ಎಂದು ಪ್ರಾಂಶುಪಾಲರು ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!