ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದ ಅಕ್ಷತಾಗೆ ಸನ್ಮಾನ

ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ  8ನೇ ರ‍್ಯಾಂಕ್ ಪಡೆದ ಅಕ್ಷತಾಗೆ ಸನ್ಮಾನ

ಹರಪನಹಳ್ಳಿ, ಏ. 15 – ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಪಡೆದ ತಾಲ್ಲೂಕಿನ ತಾಳೆದಹಳ್ಳಿ ಗ್ರಾಮದ ಪಿ. ಅಕ್ಷತಾ ಅವರನ್ನು  ತಾಲ್ಲೂಕು ಉಪ್ಪಾರ ಸಂಘ, ತಾಲ್ಲೂಕು ಉಪ್ಪಾರ ನೌಕರರ ಸಂಘ, ತಾಲ್ಲೂಕು ಉಪ್ಪಾರ ಯುವಕರ ಸಂಘ, ಹಾಗೂ ಶ್ರೀ ಭಗೀರಥ ಉಪ್ಪಾರ ಸೌಹಾರ್ದ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ತಾಳೆದಹಳ್ಳಿ ಗ್ರಾಮಕ್ಕೆ ತೆರಳಿ ಸನ್ಮಾನಿಸಲಾಯಿತು. 

ಈ ವೇಳೆ ಸಮಾಜದ ಅಧ್ಯಕ್ಷ ಟಿ. ತಿಮ್ಮಪ್ಪ ಮಾತನಾಡಿ, ಮುಂದಿನ ವಿದ್ಯಾಭ್ಯಾಸ ಉಜ್ವಲವಾಗಿ ಬೆಳಗಿ ರಾಜ್ಯದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಶುಭ ಹಾರೈಸಿದರು

ತಾಲ್ಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎಂ. ರಮೇಶ್  ಮಾತನಾಡಿ,  ಪ್ರತಿಭೆ ಎಂಬುದು ಸಾಧಕರ ಸ್ವತ್ತೆ ಹೊರತು ಸೋಮಾರಿಗಳ ಸ್ವತ್ತಲ್ಲ, ಯಾರು ಸತತವಾದ ಅಭ್ಯಾಸವನ್ನು ನಿರ್ವಹಿಸುತ್ತಾರೋ ಅಂಥವರು ಸಾಧನೆ ಮಾಡಲಿಕ್ಕೆ ಸಾಧ್ಯವಿದೆ ಈ ಮೂಲಕ ಸಮಾಜಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ಈ ವೇಳೆ ನಿವೃತ್ತ ಮುಖ್ಯ ಶಿಕ್ಷಕಿ ಸುಭದ್ರಮ್ಮ ಮಾಡ್ಲಗೇರಿ, ಶಿಕ್ಷಕ ಕೆ. ಅಂಜಿನಪ್ಪ, ಕಬ್ಬಳ್ಳಿ ಗೀತಾ, ಡಿ.ಮಂಜಪ್ಪ, ಜಿ.ಎಚ್.ತಿಪ್ಪೇಸ್ವಾಮಿ, ಮುಖಂಡ ನೀಲಗುಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷ  ಕೆ. ಹನುಮಂತ, ತಾಳೆದಹಳ್ಳಿ ಶಾಲೆಯ ಮುಖ್ಯ ಗುರುಗಳಾದ ಗುರುಪ್ರಸಾದ್, ಮುಖಂಡ ಕೆ.ತಿಮ್ಮಪ್ಪ,  ಟಿ ಚನ್ನಬಸಪ್ಪ, ಸಂಘಟನೆಗಳ ಪದಾಧಿಕಾರಿಗಳಾದ ಯು. ಪ್ರಕಾಶ್, ಯು. ರಾಜಪ್ಪ, ಗೌರಮ್ಮ, ಶಂಕರನಳ್ಳಿ ಅಂಜಿನಪ್ಪ, ತಿರುಪತಿ, ಡಿ. ರಾಜಪ್ಪ, ಜಿ. ಮಹೇಶ, ಚೌಡಪ್ಪ ತಿಪ್ಪನಾಯಕನಹಳ್ಳಿ ಪಕೀರಪ್ಪ, ಊರಿನ ಮುಖಂಡರುಗಳಾದ ಬಸವರಾಜಪ್ಪ, ಗೋಣೆಪ್ಪ, ಪರಸಪ್ಪ, ಶಿವಪ್ಪ ಸೇರಿದಂತೆ ಇತರರು ಇದ್ದರು.

error: Content is protected !!