ನೊಂದವರಿಗೆ ಸಲ್ಲುವ ಸಹಾಯವೇ ನಿಜವಾದ ದೇವರ ಸೇವೆ : ಷರೀಫ್

ನೊಂದವರಿಗೆ ಸಲ್ಲುವ ಸಹಾಯವೇ ನಿಜವಾದ ದೇವರ ಸೇವೆ : ಷರೀಫ್

ಹರಪನಹಳ್ಳಿ, ಏ. 7 – ನೊಂದವರಿಗೆ ಸಲ್ಲುವ ಸಹಾಯವೇ ನಿಜವಾದ ದೇವರ ಸೇವೆ ಎಂದು ಜಿಲ್ಲಾ ಸರ್ಕಾರಿ  ಮುಸ್ಲಿಂ ನೌಕರರ  ಅಧ್ಯಕ್ಷ ಎಂ. ಷರೀಫ್ ಹೇಳಿದರು.

ಪಟ್ಟಣದ ಅಂಜುಮನ್ ಶಾದಿ ಮಹಲ್‌ನಲ್ಲಿ ಸರ್ಕಾರಿ  ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ರಂಜಾನ್‌ ಹಬ್ಬದ ಪ್ರಯುಕ್ತ ನಿರ್ಗತಿಕ, ಬಡ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ರಂಜಾನ್‌ ಹಬ್ಬವು ದಾನ, ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ  ಆಹಾರ ಕಿಟ್ ವಿತರಣೆ ಮಾಡುವುದೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದರು.

ಸರ್ಕಾರಿ  ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಉಸ್ಮಾನ್ ಮಾತನಾಡಿ, ಮಾನವೀಯ ದೌರ್ಬಲ್ಯಗಳಿಂದ ಮನುಷ್ಯ ನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವುದೇ 1 ತಿಂಗಳ ಪೂರ್ಣ ವ್ರತಾಚರಣೆ ಉದ್ದೇಶವಾಗಿದೆ ಎಂದರು.

ಕಾರ್ಯದರ್ಶಿ ಹೆಚ್. ಸಲಿಂ ಮಾತನಾಡಿ, ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪದಾಧಿಕಾರಿ ಎಂ. ಯಾಹ್ಯ, ಉಪಾಧ್ಯಕ್ಷ ಎಸ್. ಶಫಿ, ನಿರ್ದೇಶಕ ಅರ್ಜುನ ಮುನ್ನಿಸ್, ಸಿ.ಆರ್.ಪಿ. ರುಕ್ಸಾನ್, ಅಬ್ದುಲ್ ಸಲಾಂ, ಮುಖಂಡ ಗುಲಾಬ್ ಜಾನ್, ಅಮಾನುಲ್ಲಾ, ನೂರುಲ್ಲಾ, ಶಬ್ಬೀರ್,  ದಾದಪೀರ್, ಹುಸೇನ್ ಪೀರ್, ಜಮಾಲುದ್ದೀನ್, ಪೀರಾ ಸಾಹೇಬ್, ನಜೀರ್, ಎಸ್. ನಗೀನ, ನಫೀಸಾ ಸೇರಿದಂತೆ ಇತರರು ಇದ್ದರು.

error: Content is protected !!