ನೂತನ ತಂತ್ರಾಂಶದಿಂದ ದಿನದಲ್ಲಿ ಆಸ್ತಿ ನೋಂದಣಿ

ನೂತನ ತಂತ್ರಾಂಶದಿಂದ ದಿನದಲ್ಲಿ ಆಸ್ತಿ ನೋಂದಣಿ

ಹರಪನಹಳ್ಳಿ, ಮೇ 16- ಸಾರ್ವಜನಿಕರ ಸಮಯ ವ್ಯರ್ಥ ಮಾಡದೇ ಒಂದೇ ದಿನದಲ್ಲಿ ತಮ್ಮ ಆಸ್ತಿ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಕಾವೇರಿ 2.0 ತಂತ್ರಾಂಶದ ಮೂಲಕ ನೋಂದಾ ಯಿಸಿಕೊಳ್ಳಬಹುದು ಎಂದು ಜಿಲ್ಲಾ ನೋಂದ ಣಾಧಿಕಾರಿ ಕರಿಯಮ್ಮ ಕೆ.ಟಿ.ಓ. ಹೇಳಿದರು.

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ಆಸ್ತಿಗಳನ್ನು ಕೈ ಬರಹದಿಂದ ನೋಂದಣಿ ಮಾಡಲಾಗುತ್ತಿತ್ತು. ನಂತರ ಕಾವೇರಿ 2.0 ತಂತ್ರಾಂಶ ಅಭಿವೃದ್ಧಿಗೊಂಡಿದ್ದರಿಂದ ಕಛೇರಿ ಯಲ್ಲಿ ಕಂಪ್ಯೂಟರ್ ಮೂಲಕ ನೋಂದಣಿ ಮಾಡ ಲಾಗುತ್ತಿದೆ. ಈ ತಂತ್ರಜ್ಞಾನವು ಇನ್ನು ಮುಂದು ವರೆದು, ಕಾವೇರಿ 2.0  ಆನ್‌ಲೈನ್ ಮೂಲಕ ನೋಂದಣಿ ಮಾಡಲು ನೆರವಾಗುತ್ತದೆ ಎಂದರು.

ಉಪ ನೋಂದಣಾಧಿಕಾರಿ ದೀಪ ಮ್ಯಾಳಿ ಮಾತನಾಡಿ, ಕಾವೇರಿ 2.0 ತಂತ್ರಾಂಶದ ಅಂತ ರ್ಜಾಲದಲ್ಲಿ ಖರೀದಿದಾರರು, ಮಾರಾಟಗಾರರು ಹಾಗೂ ನೋಂದಾಯಿಸಿದ ಆಸ್ತಿಯ ದಾಖಲೆ  ಗಳನ್ನು ನೋಂದಣಿ ಮಾಡಿದಾಗ ನೋಂದ ಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಗದಿಪಡಿಸಿದ ಶುಲ್ಕ ಪಾವತಿಸಿದ ನಂತರ ನೋಂದಣಿ ಮಾಡಲಾಗುವುದು. 

ಈ ನೂತನ ತಂತ್ರಜ್ಞಾನದ ಉಪಯೋಗ ವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಈ ವೇಳೆ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.