ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದಲ್ಲಿ `ಸಮನ್ವಯ’ ಆರಂಭ

ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದಲ್ಲಿ `ಸಮನ್ವಯ’ ಆರಂಭ

ದಾವಣಗೆರೆ, ಜೂ.6-  ನಗರದ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯದ  ವಿದ್ಯಾರ್ಥಿ ಸಂಘ `ಸಮನ್ವಯ’ 2023ರ ಉದ್ಘಾಟನಾ ಸಮಾರಂಭವು ಮೊನ್ನೆ ಜರುಗಿತು.

ಎಸ್. ಎಸ್. ಕೇರ್ ಟ್ರಸ್ಟ್‌ನ   ಡಾ. ಪ್ರಭಾ ಮಲ್ಲಿಕಾರ್ಜುನ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇದುವರೆಗೂ ಎಸ್. ಎಸ್. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ಆರೋಗ್ಯ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ   ಜನಪರ ಕಾರ್ಯಕ್ರಮಗಳ  ಬಗ್ಗೆ ಇನ್ನೂ ಹೆಚ್ಚಿನ ಅರಿವನ್ನು, ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ವಿದ್ಯಾರ್ಥಿ ಸಂಘವು ಮಾಡುವಂತೆ ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ  ವಹಿಸಿದ್ದ  ಕಾಲೇಜಿನ ಪ್ರಾಂಶುಪಾಲ  ಡಾ. ಬಿ.ಎಸ್.ಪ್ರಸಾದ್  ಮಾತನಾಡಿ,   ಕಲೆ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  

ನೂತನ ವಿದ್ಯಾರ್ಥಿ ಸಂಘ `ಸಮನ್ವಯ- 2023′ ಚೇರ್ಮನ್ ಡಾ. ಹರೀಶ್ ಕುಮಾರ್ ವಿ. ಎಸ್. ಮತ್ತು ಸಹ ಚೇರ್ಮನ್  ಡಾ. ವೆಂಕಟೇಶ ಬಿ. ಕೆ. ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿದ ಡಾ. ಪ್ರಸಾದ್, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲರಾಗಿ, ಜವಾಬ್ದಾರಿಯುತವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿ ಸಲು ತಿಳಿಸಿದರು.

ಕಳೆದ ಬಾರಿಯ ವಿದ್ಯಾರ್ಥಿ ಸಂಘ (ಸಂವತ್ಸರ-2022ರ) ನಿರ್ಗಮಿತ ಚೇರ್ಮನ್‍ ಡಾ.ವಿಜಯಕುಮಾರ್ ಬಿ. ಜತ್ತಿ   ವಾರ್ಷಿಕ ವರದಿ ಒಪ್ಪಿಸಿದರು. 

ವಿದ್ಯಾರ್ಥಿ ಸಂಘದ ಚೇರ್ಮನ್‍ ಡಾ. ಹರೀಶ್ ಕುಮಾರ್ ವಿ. ಎಸ್.  ಮಾತನಾಡಿ, ವೈದ್ಯಕೀಯ ಶಿಕ್ಷಣಕ್ಕಾಗಿ ಉನ್ನತ ಮಟ್ಟದ ಆಧುನಿಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ವಿದ್ಯಾರ್ಥಿಗಳ ಸರ್ವತೋ ಮುಖ ಬೆಳವಣಿಗೆಗೆ ಸದಾ ಪ್ರೋತ್ಸಾಹಿಸುತ್ತಿರುವ  ಸಂಸ್ಥೆಯ ಮಹಾಪೋಷಕರಾದ ಶಾಸಕ ಶಾಮನೂರು ಶಿವಶಂಕರಪ್ಪ   ಮತ್ತು  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್  ಅವರುಗಳಿಗೆ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕ   ಡಾ.ಎ.ಅರುಣ್‌ಕುಮಾರ್  ಹಾಗೂ ಸಂಸ್ಥೆಯ  ವೈದ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿಗಳಾದ ಕಾರ್ತಿಕ್ ಮತ್ತು ಉಷಾ ಕಾರ್ಯಕ್ರಮ ನಿರೂಪಿಸಿದರೆ,   ಸ್ವಾಗತವನ್ನು ಪವನ್ ಮತ್ತು ಗಂಗಾ  ಬಯಸಿದರು.

error: Content is protected !!