ದಾವಣಗೆರೆ ಸಿಟಿ ತರಳಬಾಳು ಬಡಾವಣೆ 2ನೇಮೇನ್, 7ನೇ ಕ್ರಾಸ್ ವಾಸಿ ನಿವೃತ್ತ ಶಿಕ್ಷಕರಾದ ಶ್ರೀ ಮುರುಗೇಂದ್ರಪ್ಪ ಇವರು ದಿನಾಂಕ 28.5.2023ರ ಭಾನುವಾರ ಮಧ್ಯಾಹ್ನ 3.30ಕ್ಕೆ ಮೈಸೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 83 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.5.2023ರ ಸೋಮವಾರ ಮಧ್ಯಾಹ್ನ 1 ಕ್ಕೆ ಮೃತರ ಸ್ವಗ್ರಾಮವಾದ ಚನ್ನಗಿರಿ ತಾಲ್ಲೂಕು ಹಿರೇಕೋಗಲೂರು ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
May 4, 2024