ಬಾಪೂಜಿ ಎಂಬಿಎ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.18- ಅತ್ಯಾತಿ ಟೆಕ್ನಾಲಜೀಸ್ ಸಂಸ್ಥೆ ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪ್ರಕಾಶ್ ಪ್ರಭು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಅವಕಾಶ ವಂಚಿತ ಅನೇಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಾಧ್ಯವಾಗಿದೆ ಎಂಬ ಹೆಮ್ಮೆ ತಮ್ಮದಾಗಿದೆ ಎಂದರು.

ನಮ್ಮ ತಂಡಗಳು ಮಹಿಳೆಯರಿಗೆ ವಿಶೇಷವಾಗಿ ತರಬೇತಿ, ಶಿಕ್ಷಣ ಮತ್ತು ಸ್ವತಂತ್ರ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.

ಅತ್ಯಾತಿ ಟೆಕ್ನಾಲಜೀಸ್ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರಾದ ದಾವಣಗೆೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮದ ಶ್ರೀಮತಿ ಅರುಣ ಸಂಪಿಗೆ ಅಧ್ಯಕ್ಷತೆ ವಹಿಸಿದ್ದರು.

ಬಾಪೂಜಿ ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ,
ಡಾ. ಕೆ. ಸಿದ್ಧಪ್ಪ, ಡಾ. ಸುಷ್ಮಿತಾ ವೆಂಕಟೇಶ್, ಸುರೇಶ್, ಡಾ ನವ್ಯ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು. ಶ್ರೀಮತಿ ಸಹನಾ ಪ್ರಾರ್ಥಿಸಿದರು. ಸುರೇಶ್ ನೆರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರಯ್ಯ ನಿರೂಪಿಸಿದರು ಶಿವಾನಂದ ವಂದಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಯ ಎಂಬಿಸಿಗಳು, ಗ್ರಾಹಕರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!