ಸಿದ್ದಮ್ಮನಹಳ್ಳಿಯಲ್ಲಿ ಶೇಂಗಾ ಬೆಳೆ ಪ್ರಾತ್ಯಕ್ಷಿಕೆ

ದಾವಣಗೆರೆ, ಫೆ.17 – ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆಕಾಳು ಯೋಜನೆ ಅಡಿಯಲ್ಲಿ ಗುಚ್ಛ ಗ್ರಾಮಗಳ ಶೇಂಗಾ ಬೆಳೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು  ಹಮ್ಮಿಕೊಂಡಿದ್ದರು.

ಕೃಷಿ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್, ಶೇಂಗಾ ಬೆಳೆ ಮೊಳಕೆ  ಒಡೆದು, ಹೂವಾಡುವ ಹಂತದಲ್ಲಿ ಇದೆ. ಈ ಸಮಯದಲ್ಲಿ ಹಸಿರು ಹುಳುವಿನ ನಿರ್ವಹಣೆಗಾಗಿ ಕ್ಲೋರೋಪೈರಿಫಾಸ್ 2 ಎಂ.ಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಹಾಗೂ ನೀರಿನಲ್ಲಿ ಕರಗುವ ಪೊಟ್ಯಾಶಿಯಂ ನೈಟ್ರೇಟ್ 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಪೋಷಕಾಂಶಗಳ ನಿರ್ವಹಣೆಯನ್ನು ಮಾಡಬಹುದು ಎಂದರು.

ಶೇಂಗಾ ತಾಕುಗಳಿಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ದೇವರಾಜ್ , ಬಸವನ ಗೌಡ, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರಾದ ಓಂಕಾರಪ್ಪ, ಕೃಷ್ಣಪ್ಪ ಕ್ಷೇತ್ರ ಭೇಟಿ ಮಾಡಿದರು.

error: Content is protected !!