ಹೊನ್ನಾಳಿಯ ವಿಜಯ ಪದವಿ ಪೂರ್ವ ಕಾಲೇಜಿಗೆ ಶೇ. 100

ಹೊನ್ನಾಳಿಯ ವಿಜಯ ಪದವಿ ಪೂರ್ವ ಕಾಲೇಜಿಗೆ ಶೇ. 100

ಹೊನ್ನಾಳಿ, ಏ. 11 – ತಾಲ್ಲೂಕಿನ ಎಚ್. ಕಡದಕಟ್ಟೆ ಸಮೀಪ ದಲ್ಲಿರುವ ಶ್ರೀ ವಿಜಯ ಪದವಿಪೂರ್ವ ಕಾಲೇಜಿಗೆ  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ ಎರಡನೇ ಬಾರಿಗೂ ಶೇ. 100  ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳೆರಡೂ ಸೇರಿ 92 ಅತ್ಯುನ್ನತ ಶ್ರೇಣಿ,  96 ಪ್ರಥಮ ಶ್ರೇಣಿ ಹಾಗೂ  6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ವಾಣಿಜ್ಯ ವಿಭಾಗದ ಎಚ್.ಜೆ. ವರ್ಷ ಅವರು 600 ಅಂಕಗಳಿಗೆ  583 ಅಂಕಗಳನ್ನು ಹಾಗೂ  ವಿಜ್ಞಾನ ವಿಭಾಗದ ಕೆ.ಟಿ. ಅಪೂರ್ವ ಅವರು 600 ಕ್ಕೆ  582 ಅಂಕಗಳನ್ನು ಗಳಿಸಿದ್ದು, ಅವಳಿ ತಾಲ್ಲೂಕಿನಲ್ಲಿಯೇ ವಿಜಯ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ವಸಂತಕುಮಾರ್ ಮಾಹಿತಿ ನೀಡಿದ್ದಾರೆ. 

ಕನ್ನಡ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು, ರಸಾಯನಶಾಸ್ತ್ರದಲ್ಲಿ ಒಬ್ಬರು 100 ಅಂಕಗಳನ್ನು, ಗಣಿತದಲ್ಲಿ 4 ವಿದ್ಯಾರ್ಥಿಗಳು 100, 99  ಅಂಕಗಳನ್ನು ಪಡೆದುಕೊಂಡಿದ್ದಾರೆ. ಜೀವಶಾಸ್ತ್ರದಲ್ಲಿ ಒಬ್ಬರು 100 ಕ್ಕೆ 100,  ಲೆಕ್ಕಶಾಸ್ತ್ರದಲ್ಲಿ 6 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು, ಅರ್ಥಶಾಸ್ತ್ರದಲ್ಲಿ ಒಬ್ಬರು 100 ಕ್ಕೆ 99 ಅಂಕಗಳನ್ನು, ಗಣಕಶಾಸ್ತ್ರದಲ್ಲಿ ಇಬ್ಬರು 100 ಕ್ಕೆ 99 ಅಂಕಗಳನ್ನು ಪಡೆದುಕೊಂಡಿದ್ದಾರೆ.

error: Content is protected !!