ಆನಂದ್ ಕಾಲೇಜ್‌ಗೆ ಶೇ.100 ಫಲಿತಾಂಶ

ದಾವಣಗೆರೆ, ಏ.11- ಆನಂದ್ ಪಿಯು ಕಾಲೇಜು ಪ್ರಥಮ ಬ್ಯಾಚ್‌ನಲ್ಲಿಯೇ ಶೇ.100ರಷ್ಟು ಫಲಿತಾಂಶ ಪಡೆದು ಸಾಧನೆ ಹೊಸ್ತಿಲಲ್ಲಿದೆ ಎಂದು ಸಂಸ್ಥೆಯ ಚೇರ್ಮನ್ ಆನಂದ್ ಪೋತಿನ ಹರ್ಷ ವ್ಯಕ್ತಪಡಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪರೀಕ್ಷೆ ಬರೆದ 100 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು, 42 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 12 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಾನಿಕ ಬಿ.ಎಂ. ವಿಜ್ಞಾನ ವಿಭಾಗದಲ್ಲಿ 588 ಅಂಕ (ಶೇ.98) ಪಡೆದು, ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಜ್ಯೋತಿ ಆರ್. ಜಿ. 585 (97.5), ವಿನಯ್ ಎ.ಎಂ. 583 (ಶೇ.97.16), ಸಂಜಯ್ ಯು.581 (ಶೇ.97) ಹಾಗೂ ಸಹನಾ ಕೆ.ಎಂ. 580 (ಶೇ.97) ಅಂಕ ಪಡೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ಅವಿನಾಶ್ ಜೆ.ನಾಯ್ಕ, ನಿರ್ದೇಶಕರುಗಳಾದ ಗಿರೀಶ್, ಕಿರಣ್, ವಿದ್ಯಾರ್ಥಿಗಳಾದ ಸಾನಿಕಾ ಬಿ.ಎಂ., ಜ್ಯೋತಿ ಆರ್.ಜೆ., ಸಹನಾ ಕೆ.ಎಂ. ವಿನಯ್, ಸಂಜಯ್ ಉಪಸ್ಥಿತರಿದ್ದರು.

error: Content is protected !!