ಹಳೇ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪಣ ತೊಟ್ಟಿದೆ

ಹಳೇ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪಣ ತೊಟ್ಟಿದೆ

ವಕೀಲರ ಬೆಂಬಲದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ಸೆಂ

ದಾವಣಗೆರೆ, ಮೇ 1 – ಮಧ್ಯ ಕರ್ನಾಟಕದ ಜಿಲ್ಲೆಯಲ್ಲಿ ಹೈಕೋರ್ಟ್ ಮಾದರಿಯಲ್ಲಿ ಕೋರ್ಟ್ ನಿರ್ಮಿಸಲು ಪ್ಲಾನ್ ಮಾಡಿದ್ದೆ. ಆದರೆ, ಬಿಜೆಪಿ ಸರ್ಕಾರ ಬಂದು ಅವರಿಗೆ ತಿಳಿದ ಹಾಗೇ ಕೋರ್ಟ್ ನಿರ್ಮಿಸಿದೆ. ಕೋರ್ಟ್ ನವೀಕರಣಕ್ಕೆ ಹೆಚ್ಚಿನ ಒತ್ತು ಹಾಗೂ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮುಂದಾಗುವುದು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ತಿಳಿಸಿದರು. 

ನಗರದ ಬಿಸ್ಮಿಲ್ಲಾ ಲೇಔಟ್‍ನಲ್ಲಿ ವಕೀಲ ರಜ್ವಿಖಾನ್ ನಿವಾಸದಲ್ಲಿ ವಕೀಲರ   ಬೆಂಬಲದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

1994 ರ ದಶಕದಲ್ಲಿ ಮೊದಲ ಚುನಾವಣೆ ಎದುರಿಸಿದಾಗ ಇಲ್ಲಿನ ಮುಸ್ಲಿಂ ಮುಖಂಡರುಗಳು ತಮಗೆ ಸಂಘಟನೆಯ ಮೂಲಕ ಸಾಥ್ ನೀಡಿದರು ಎಂದು ಸ್ಮರಿಸಿದ ಸಚಿವರು, ಹಳೇ ಭಾಗದಲ್ಲಿ ಹಿಂದೆ ನೀರಿನ ಸಮಸ್ಯೆ ವಿಪರೀತ ಇತ್ತು. ಹಗಲಿನಲ್ಲಿ ಕೆಲಸ ರಾತ್ರಿ ಹೊತ್ತು ಬಾತಿ ಕೆರೆಯಿಂದ ನೀರು ತರಬೇಕಾ ಗಿತ್ತು. ಇದನ್ನು ನಿವಾರಣೆ ಕುಂದುವಾಡ ಹಾಗೂ ಟಿವಿ ಸ್ಟೇಷನ್ ಕೆರೆಗಳನ್ನು ನಿರ್ಮಾಣ ಮಾಡಲಾ ಯಿತು. ಈಗ ನೀರಿನ ಸಮಸ್ಯೆ ನಿವಾರಣೆ ಆಗಿದೆ. 

ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಮನೆಗಳನ್ನು ನಿರ್ಮಿಸಿದೆ. ಅನೇಕ ಸವಲತ್ತುಗಳನ್ನು ನೀಡಿದೆ. ಹಳೇ ನಗರ ಭಾಗದಲ್ಲಿ ಕ್ರೀಡಾಂಗಣ ಆಗಬೇಕಿದೆ, ಪಾರ್ಕ್‌ಗಳು ಬೇಕಿವೆ. ಶಾಲಾ ಕಟ್ಟಡಗಳು ನಿರ್ಮಾಣ ಆಗಬೇಕಿದೆ. 

ಇಲ್ಲಿನ ಮುಖಂಡರುಗಳು ವೈಮನಸ್ಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದರೆ ಎಲ್ಲವೂ ಸಾಧ್ಯ ಎಂದ ಅವರು, ಕಳೆದ ಬಾರಿ ಕಡಿಮೆ ಮತದಾನ ಆಗಿದ್ದರಿಂದ ಸೋಲಾಯಿತು. ಈ ಬಾರಿ ಈ ತಪ್ಪು ಮಾಡಬೇಡಿ. ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು, ಜನರಿಗೆ ಸ್ಪಂದಿಸುವ ಮತ್ತು ಕಾನೂನು ತಿಳಿದಿರುವ ಹಾಗೂ ಉರ್ದು ಸೇರಿದಂತೆ ನಾಲ್ಕೈದು ಭಾಷೆ ಮಾತನಾಡುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತವನ್ನು ಹಾಕಿ ಎಂದು ಕೇಳಿಕೊಂಡರು. 

ಈ ಸಂದರ್ಭದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ವಕೀಲರಾದ ರಜ್ವಿಖಾನ್, ಹನುಮಂತಪ್ಪ, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

error: Content is protected !!