ನಾಳೆ ಆರೋಗ್ಯ ತಪಾಸಣಾ ಶಿಬಿರ

ದಾವಣಗೆರೆ, ಮಾ. 26-  ಸಿಟಿ ಸೆಂಟ್ರಲ್ ಆಸ್ಪತ್ರೆಯು 25ನೇ ವರ್ಷದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಾಡಿದ್ದು ದಿನಾಂಕ 28ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸಹಾಯಕ ಆಡಳಿತಾಧಿ ಕಾರಿ ಶ್ರೀನಂದನ್ ರಾವ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹದಡಿ ರಸ್ತೆಯಲ್ಲಿರುವ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಘಟಕ-2 ಹಾಗೂ ಸ್ಪೈರ್ ಕ್ಲಿನಿಕ್ ಸಂಯುಕ್ತಾಶ್ರಯದಲ್ಲಿ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಘಟಕ-2 ರಲ್ಲಿ ಈ ಶಿಬಿರ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೀರೇಶ್, ಡಿ.ಮಧು, ಮರುಳಸಿದ್ದೇಶ್ ಉಪಸ್ಥಿತರಿದ್ದರು.

error: Content is protected !!