ಮತದಾನ ಜಾಗೃತಿಗೆ ಫ್ಯಾಷನ್ ಶೋ

ಮತದಾನ ಜಾಗೃತಿಗೆ ಫ್ಯಾಷನ್ ಶೋ

ದಾವಣಗೆರೆ, ಏ. 24 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಇಲಾ ಖೆಯ ವತಿಯಿಂದ ಲೋಕಸಭಾ ಚುನಾವಣಾ ಮತದಾರರ ಜಾಗೃತಿಗೆ ಗ್ಲಾಸ್‍ಹೌಸ್‍ನಲ್ಲಿ ಮಹಿಳೆಯರಿಂದ ಫ್ಯಾಷನ್‌ ಶೋ ಮೂಲಕ  ಮತದಾನ ಜಾಗೃತಿ ಮೂಡಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ಮಾತನಾಡಿ ಮೇ 7 ರಂದು ತಪ್ಪದೇ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಹೆಚ್ಚು ಶಕ್ತಿಯನ್ನು ತುಂಬಬೇಕಾಗಿದೆ ಎಂದು ಕರೆ ನೀಡಿ ನೀವು ಮತದಾನ ಮಾಡಿ ನಿಮ್ಮ ಕುಟುಂಬ, ನೆರೆಹೊರೆ, ವಾರ್ಡ್, ಗ್ರಾಮದ ಜನರನ್ನು ಉತ್ತೇಜಿಸಿ ಮತದಾನ ಹೆಚ್ಚಿಸಲು ಶ್ರಮ ವಹಿಸಲು ಕರೆ ನೀಡಿದರು. 

ನೂರಾರು ಮಹಿಳೆಯರು ಹೊಸ ಹೊಸ ಉಡುಪುಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಫ್ಯಾಷನ್ ಶೋನಲ್ಲಿ ಭಾಗಿಯಾಗಿ ಮತದಾನದ ಮಹತ್ವ ಸಾರುವ ಘೋಷಣೆಯುಳ್ಳ ಪ್ಲೆಕಾರ್ಡ್‍ಗ ಳನ್ನು ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು,

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ಉಪನಿರ್ದೇಶಕಿ ಶಾರದಮ್ಮ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಅಶೋಕ್ ತಾಮ್ಲೆ,  ಎಸಿಡಿಪಿಓ ಪ್ರಿಯದರ್ಶಿನಿ, ಜಿಲ್ಲೆಯ ಅಂಗನವಾಡಿ  ಕಾರ್ಯಕರ್ತೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!