ಹರಪನಹಳ್ಳಿ : ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ

ಹರಪನಹಳ್ಳಿ : ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ

ಹರಪನಹಳ್ಳಿ, ಮಾ. 26 – ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವು, ಸೋಲು ಮುಖ್ಯವಲ್ಲ. ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ತನ್ನಿ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಕರೆ ನೀಡಿದರು.

ತಾಲ್ಲೂಕಿನ ಹಲವಾಗಲು ಗ್ರಾಮದ ಮುಳಗುಂದ ಬಸವರಾಜಪ್ಪ ಇವರ ಸ್ಮರಣಾರ್ಥ ಎಸ್. ನಿಜಲಿಂಗಪ್ಪ ಕ್ರಿಕೆಟರ್ಸ್ (ಎನ್‍ಸಿಸಿ) ಇವರ ವತಿಯಿಂದ ಗಡ್ಡಿಗಾಲ ರವೀಂದ್ರ ಕ್ರೀಡಾಂಗಣದಲ್ಲಿ ನಡೆದ 25ನೇ ವರ್ಷದ ರಾಜ್ಯ ಮಟ್ಟದ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‍ಗೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ಗ್ರಾಮೀಣ ಕ್ರೀಡೆಗಳು ಜನರನ್ನು ರಂಜಿಸುತ್ತಿದ್ದವು, ಆದರೆ ಇಂದು ಮೊಬೈಲ್‍ನಿಂದ, ಸಾಮಾಜಿಕ ಜಾಲತಾಣಗಳಿಂದ ಯುವಕರು ದಾರಿತಪ್ಪುತ್ತಿದ್ದು, ಕ್ರೀಡೆಯಲ್ಲಿ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಟಿ. ವನಜಾಕ್ಷಿ ಶಿವಯೋಗಿ ಮಾತನಾಡಿ, ಯಾವುದೇ ಕ್ರೀಡೆಗಳಾಗಲಿ ಅವುಗಳಲ್ಲಿ ಭಾಗವಹಿಸಿ, ರಾಜ್ಯ, ಜಿಲ್ಲೆ, ತಾಲ್ಲೂಕಿಗೆ ಗ್ರಾಮಕ್ಕೆ ಕೀರ್ತಿ ತರುವಂತ ಪ್ರತಿಭೆಯನ್ನು ಅನಾವರಣಗೊಳಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವರ್ತಕರಾದ ಪ್ರಶಾಂತ ಪಾಟೀಲ್, ಜೆ. ಪರಶುರಾಮ, ಯೋಗೇಶ, ಕೆ.ಗಂಗಪ್ಪ, ಭೋವಿ ವೆಂಕಟೇಶ, ಮಹೇಂದ್ರ, ಶಿವಾನಂದಪ್ಪ, ಬಸವರಾಜ, ಮುತ್ತು, ಜಿ.ಪುನೀತ್, ಎ. ಪ್ರಶಾಂತ, ಜಿ. ಅಜ್ಜಯ್ಯ ಮಾರುತಿ, ವೆಂಕಪ್ಪ ಸೇರಿದಂತೆ ಇತರರು ಇದ್ದರು.

error: Content is protected !!