1.70 ಲಕ್ಷ ರೂ. ನಗದು ಅಧಿಕಾರಿಗಳ ವಶಕ್ಕೆ

1.70 ಲಕ್ಷ ರೂ. ನಗದು ಅಧಿಕಾರಿಗಳ ವಶಕ್ಕೆ

ಹರಪನಹಳ್ಳಿ, ಮಾ. 26 – ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.70 ಲಕ್ಷ ರೂ. ಹಣವನ್ನು ತಾಲ್ಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿಯಿರುವ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಗಟೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಹಳ್ಳಿ ಕ್ರಾಸ್ ಬಳಿ ತೆರೆದಿರುವ ಚೆಕ್‍ಪೋಸ್ಟ್‍ನಲ್ಲಿ ದಾಖಲೆ ಇಲ್ಲದೇ ಬೆಣ್ಣಿಹಳ್ಳಿ ಗ್ರಾಮದಿಂದ ಹರಪನಹಳ್ಳಿ ಕಡೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಾರಿನಲ್ಲಿದ್ದ 1.ಲಕ್ಷ ರೂ.ನಗದು ಹಾಗೂ ಅದೇ ಮಾರ್ಗವಾಗಿ ಚಲಿಸುತ್ತಿದ್ದ ಮತ್ತೊಬ್ಬರ ಬೈಕ್‍ನಲ್ಲಿ 70 ಸಾವಿರ ರೂ. ಹಣ ತಪಾಸಣೆ ವೇಳೆ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿ ಸೂಕ್ತ ದಾಖಲೆ ಇಲ್ಲದ ಕಾರಣ ಚೆಕ್‍ಪೋಸ್ಟ್ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದರು.

error: Content is protected !!