ಹರಪನಹಳ್ಳಿಯಲ್ಲಿ ಲೋಕ ಅದಾಲತ್ ಮೂಲಕ 1311 ಪ್ರಕರಣ ಇತ್ಯರ್ಥ

ಹರಪನಹಳ್ಳಿಯಲ್ಲಿ ಲೋಕ ಅದಾಲತ್ ಮೂಲಕ 1311 ಪ್ರಕರಣ ಇತ್ಯರ್ಥ

ಹರಪನಹಳ್ಳಿ, ಮಾ.18- ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀ ಸಂಧಾನದಡಿ ಹರಪನಹಳ್ಳಿಯ ಉಭಯ ನ್ಯಾಯಾಲಯಗಳಲ್ಲಿ ಶನಿವಾರದಂದು ನ್ಯಾಯಾಧೀಶರಾದ ಎಂ. ಭಾರತಿ ಮತ್ತು ಫಕ್ಕೀರವ್ವ ಕೆಳಗೇರಿ ಅವರ ನೇತೃತ್ವದಲ್ಲಿ 1604 ಪ್ರಕರಣಗಳ ಪೈಕಿ 1311 ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

ಪಟ್ಟಣದ ಉಭಯ ನ್ಯಾಯಾಲಯಗಳ ನಡೆದ ಲೋಕ ಅದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು ,  ನಿವೇಶನ ಮಾರಾಟ ಪ್ರಕರಣಗಳು ಇತ್ಯರ್ಥಗೊಂಡವು.

ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಎಂ.ಭಾರತಿ ಅವರು ರಸ್ತೆ ಅಫಘಾತ ಸೇರಿದಂತೆ ಇತರೆ 700 ಪ್ರಕರಣಗಳ ಪೈಕಿ 593 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 45,56,190 ರೂ. ಪರಿಹಾರ ಕೊಡಿಸಿದ್ದಾರೆ.

ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಅವರು 904 ಪ್ರಕರಣಗಳ ಪೈಕಿ 718 ಪ್ರಕರಣಗಳನ್ನು  ಇತ್ಯರ್ಥ ಪಡಿಸಿ 40,84,072 ರೂ. ಪರಿಹಾರ ಕೊಡಿಸಿದ್ದಾರೆ. ಒಟ್ಟು 1311  ಪ್ರಕರಣಗಳಿಗೆ 87,40,262 ರೂ.  ಪರಿಹಾರ ಒದಗಿಸಿದ್ದಾರೆ.

ಸುಮಾರು ವರ್ಷಗಳಿಂದ ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ವಿಚ್ಚೇದನಕ್ಕಾಗಿ ಕೊರ್ಟಿಗೆ ಬರುತ್ತಿದ್ದ  ಜೋಡಿಗಳ ಮನಸ್ಸು ಬದಲಾಯಿಸಿ ದಂಪತಿಗಳನ್ನು ಒಂದು ಮಾಡುವಲ್ಲಿ ನ್ಯಾಯಾಧೀಶರು ಯಶ್ವಸಿಯಾದರು.

ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ. ಪಿರ್ ಅಹಮ್ಮದ್,   ಕಾರ್ಯದರ್ಶಿ ಜಿ.ಎಸ್ ಎಂ. ಕೊಟ್ರಯ್ಯ, ಜಂಟಿ ಕಾರ್ಯದರ್ಶಿ ಎಚ್.ಎಂ. ಕೇಶವಮೂರ್ತಿ, ಖಜಾಂಚಿ  ಹೂಲೆಪ್ಪ, ಅಪರ ಸರ್ಕಾರಿ ವಕೀಲ ನಂದೀಶ್, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ನಿರ್ಮಲ, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೊಟ್ರೇಶ್, ಬಸವರಾಜ್ ಮತ್ತು ನ್ಯಾಯಾಲಯದ ಸಿಬ್ಬಂದಿ ಇದ್ದರು.

error: Content is protected !!