ಕಟ್ಟುಪಾಡಿನಲ್ಲಿ ಬದುಕದೇ, ಸ್ವತಂತ್ರವಾಗಿ ಬದುಕಿ

ಕಟ್ಟುಪಾಡಿನಲ್ಲಿ ಬದುಕದೇ, ಸ್ವತಂತ್ರವಾಗಿ ಬದುಕಿ

ದಾವಣಗೆರೆ, ಮಾ.18- ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಯಿಂದ ಈಚೆಗೆ  ಅಂತರರಾಷ್ಟೀಯ ಮಹಿಳಾ ದಿನ ಆಚರಿಸಲಾಯಿತು. ಮಹಿಳೆಯರು ಕಟ್ಟುಪಾಡಿನಲ್ಲಿ ಬದುಕದೇ ಬೃಹತ್ ಆಲದ ಮರದಂತೆ ಸ್ವತಂತ್ರರಾಗಿ ಬದುಕಬೇಕು ಎಂದು ಸಮಾಜ ಸೇವಕಿ ನೀಲಿಮಾ ಮಿಶ್ರಾ ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ  ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಸುತ್ತ ಮುತ್ತಲಲ್ಲೇ ಅನೇಕ ಆದರ್ಶ  ಮಹಿಳೆಯರಿದ್ದಾರೆ ಎಂದರು.

ಬರುವ ದಿನಗಳಲ್ಲಿ ಮಹಿಳೆಯರ ಆರೋಗ್ಯದ  ದೃಷ್ಟಿಯಿಂದ ಕ್ಯಾನ್ಸರ್ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಏರ್ಪಡಿಸುತ್ತೇವೆ ಎಂದು ತಿಳಿಸಿದರು. ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸಿದರು.

ಜೆ.ಎಸ್. ವನಿತಾ ಸ್ವಾಗತಿಸಿದರು. ಡಾ. ಶೃತಿ ಮಾಕನೂರ್ ವಂದಿಸಿದರು.  ಡಾ. ಜ್ಞಾನಶ್ರೀ ಮತ್ತು ಡಾ. ಡೆಂಜಿ ಲಾರೆನ್ಸ್ ನಿರೂಪಿಸಿದರು.

ಕಿರುವಾಡಿ ಗಿರಿಜಮ್ಮ, ಸಿ.ಬಿ. ಶೈಲಾ ಜಯಕುಮಾರ್, ಡಾ. ವಿನುತಾ, ಡಾ. ಲತಾ ಶಾಮನೂರು, ಡಾ. ಶಾಂತಲಾ ಮತ್ತು ಸಂಸ್ಥೆಯ ಮಹಿಳಾ ಸಿಬ್ಬಂದಿ ಇದ್ದರು.

error: Content is protected !!