ಬಸವಣ್ಣ ದೇವಾಲಯದ ವಿರೋಧಿಯಾಗಿರಲಿಲ್ಲ

ಮಠದ ಗುರುವಿನದು ಮುಳ್ಳಿನ ಮೇಲಿನ ನಡಿಗೆ

ಮಠದ ಗುರುವಾಗುವುದು ಹೂವಿನ ಮೇಲಿನ ನಡಿಗೆಯಲ್ಲ, ಮುಳ್ಳಿನ ಮೇಲಿನ ನಡಿಗೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಮಠದ ಗುರುವಾದರೆ ಒಳ್ಳೆಯ ಭಕ್ಷ್ಯ ಭೋಜ್ಯಗಳು ಸಿಗುತ್ತವೆ, ಆರಾಮದ ಜೀವನ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ಮಠದ, ಅದರಲ್ಲೂ ಸಿರಿಗೆರೆ ಮಠದ ಗುರುವಿನದು ಮುಳ್ಳಿನ ಮೇಲಿನ ನಡಿಗೆ. ಇತ್ತೀಚಿನ ವಾತಾವರಣ ನಿಮಗೇ ಗೊತ್ತಿದೆ ಎಂದು ಶ್ರೀಗಳು ಹೇಳಿದರು.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಡಿ. 13 – ದೇವಾಲಯವನ್ನು ಶರೀರಕ್ಕೆ ಹೋಲುವ ರೀತಿ ನಿರ್ಮಿಸಬೇಕೆಂದು ಶಿಲ್ಪಶಾಸ್ತ್ರ ಹೇಳುತ್ತದೆ. ಆದರೆ, ಬಸವಣ್ಣನವರು ದೇಹವೇ ದೇವಾಲಯ ಹೋಲುವಂತಿ ರಬೇಕು ಎಂದು ಪ್ರತಿಪಾದಿಸಿದ್ದರು ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ನಗರದ ಶಾಮನೂರು ಶಿವಶಂಕ ರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀ ಮರುಳಸಿದ್ದೇಶ್ವರ ಕಾರ್ತಿಕ ಸಮಿತಿ ಆಶ್ರಯದಲ್ಲಿ ಇಂದು ಸಂಜೆ ಆಯೋಜಿಸಲಾಗಿದ್ದ
ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ಕಾರ್ತಿಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಬಸವಣ್ಣನವರು ದೇವಾಲಯದ ವಿರೋಧಿಯಾಗಿರಲಿಲ್ಲ. ಬಸವಣ್ಣನವರೇ ದೇವಾಲಯದಲ್ಲಿ ಕೂಡಲ ಸಂಗನ ಅರ್ಚನೆ ಮಾಡಿದ್ದರು. ಆದರೆ, ಗುಡಿ – ಗುಂಡಾರಗಳಲ್ಲಿದ್ದ ಕರ್ಮಠತನವನ್ನು ಅವರು ವಿರೋಧಿಸಿದ್ದರು ಎಂದು ಶ್ರೀಗಳು ತಿಳಿಸಿದರು.

ದೇವರು ಸರ್ವಾಂತ ರ್ಯಾಮಿ ಎಂದರೆ ಗುಡಿಯಲ್ಲೂ ಸಹ ದೇವರು ಇದ್ದಾನೆ ಎಂದಾಗುತ್ತದೆ. ಗುಡಿ – ಚರ್ಚು – ಮಸೀದಿ ಸೇರಿ ಎಲ್ಲೆಡೆ ದೇವರಿದ್ದಾನೆ. ಆದರೆ, ದೇವಾಲಯ ಗಳಲ್ಲಿ ಜಾತಿ ಕಾರಣಕ್ಕಾಗಿ ಕೆಲವರನ್ನು ಒಳಗೆ ಬಿಡುತ್ತಿರಲಿಲ್ಲ. ಇದನ್ನು ಬಸವಣ್ಣ ನವರು ವಿರೋಧಿಸಿದ್ದರು ಎಂದರು.

ಆನೆಕೊಂಡದಲ್ಲಿ ತಾವು ನವಗ್ರಹ ಪ್ರತಿಷ್ಠಾಪನೆ ಮಾಡಿದ್ದಕ್ಕೆ ದಾವಣ ಗೆರೆಯ ಬಸವೇಶ್ವರ ಬಳಗದವರು ವಿರೋಧಿಸಿ ತಮಗೊಂದು ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ್ದ ತಾವು, ಯುವಕರು ನವಗ್ರಹ ಪ್ರತಿಷ್ಠಾಪನೆಗಾಗಿ ತಮ್ಮನ್ನು ಆಹ್ವಾನಿಸಿದ್ದರು. ಊರ ಹೊರಗೆ ಇರುವ §ಗುಡಿಸಲಿಗೆ¬ (ಮದ್ಯದ ತಾಣ) ಯುವಕರು ಹೋಗು ವುದಕ್ಕಿಂತ ಗುಡಿಗೆ ಹೋಗುವುದೇ ಒಳ್ಳೆ ಯದು ಎಂಬ ನಿಲುವಿನಿಂದ ನವಗ್ರಹ ಪ್ರತಿಷ್ಠಾಪನೆಗೆ ಹೋಗಿದ್ದಾಗಿ ಉತ್ತರಿ ಸಿದ್ದೆ ಎಂದು ಶ್ರೀಗಳು ಹೇಳಿದರು.

ಶರೀರದ ಮೇಲೆ ಲಿಂಗ ಧರಿಸಿದರೆ ಲಿಂಗವಂತ ಆಗುವುದಿಲ್ಲ. ಅದೇ ರೀತಿ ಲಿಂಗ ಧರಿಸದವರೂ ಲಿಂಗವಂತರಲ್ಲ ಎಂದು ಹೇಳಲು ಆಗದು. ಲಿಂಗ ಧರಿಸದ ಎಷ್ಟೋ ಜನ ಮರುಳಸಿದ್ಧರ ಆರಾಧನೆಗಾಗಿ ಇಲ್ಲಿ ಬಂದಿದ್ದೀರಿ. ನೀವೆಲ್ಲರೂ ಲಿಂಗವಂತರೆ. ಆದರೆ, ಮೊಬೈಲ್ ಬಳಕೆ ಅರಿತು ಅದನ್ನು ಸದಾ ಜೇಬಿನಲ್ಲಿಟ್ಟುಕೊಳ್ಳುತ್ತೀರಿ. ಅದೇ ರೀತಿ ಲಿಂಗದ ಮಹತ್ವವನ್ನು ಅರಿತು ಲಿಂಗಧಾರಣೆ ಮಾಡಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮೇಯರ್ ಎಸ್.ಟಿ. ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಶಿವ ಬ್ಯಾಂಕ್ ಅಧ್ಯಕ್ಷ ಸಂಗಮೇಶ್ವರ ಗೌಡ್ರು, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಕಾರ್ತಿಕ ಸಮಿತಿ ಅಧ್ಯಕ್ಷ ರಾಮಗೊಂಡನಹಳ್ಳಿ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.

ಹಾರೋಹಳ್ಳಿ ಸ್ವಾಮೀಜಿ ಪ್ರಾರ್ಥಿಸಿದರೆ, ಸಮಿತಿಯ ಕೋಶಾಧ್ಯಕ್ಷ ಕರೇಶಿವಪ್ಳ ಸಿದ್ದಣ್ಣ ಸ್ವಾಗತಿಸಿದರು.

error: Content is protected !!