ಬಾಯಿಯ ಆರೋಗ್ಯ ದಿನ

ಬಾಲ್ಯ, ಪ್ರೌಢ, ಯೌವ್ವನ, ವೃದ್ಧಾಪ್ಯದಲ್ಲಿ ಬಾಯಿಯ ಆರೋಗ್ಯಯುತ ಬಾಯಿಯಿಂದ ಬರುವ ಅಳು ಮತ್ತು ನಗುವಿನ ಶಬ್ದದಿಂದಲೇ ಮಗು ಜನಿಸಿದಾಗ ಸುತ್ತಮುತ್ತಲಿರುವವರ ಗಮನ ಸೆಳೆದು ತಾನು ಭೂಮಿಗೆ ಬಂದಿರುವ ಸೂಚನೆಯನ್ನು ಕೊಡುತ್ತದೆ. ಆಗ ಅದು ಎಲ್ಲರಿಗೂ ಒಂದು ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತದೆ.

ಮಗು ಹುಟ್ಟಿದ ತಕ್ಷಣವೇ ತಾಯಿಯ ಮೊದಲ ಎದೆ ಹಾಲನ್ನು ಸೇವಿಸಿ, ದೇಹಕ್ಕೆ ಬೇಕಾದ ರೋಗ – ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಹೀಗೆ ಶುರುವಾದ ಬಾಯಿಯ ಕಾಯಕ ಜೀವನದ ಅಂತ್ಯದವರೆಗೂ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಮಗುವಿನ ತೊದಲು ನುಡಿಗಳ ಜೊತೆ ಜೊತೆಗೆ ಹಾಲು ಹಲ್ಲುಗಳು ಬರಲು ಶುರುವಾ ದಾಗ ಉಂಟಾಗುವ ತುರಿಕೆಯಿಂದ ಕೈಗೆ ಸಿಕ್ಕ ವಸ್ತುಗಳನ್ನು ಕಚ್ಚಿ ಕೆಲವು ಮಕ್ಕಳು ಸೋಂಕಿನಿಂದ ಬೇದಿ ಮಾಡಿಕೊಂಡು ಮನೆಯವರೆಲ್ಲರಿಗೂ ಗಾಬರಿ ಗೊಳಿಸುತ್ತವೆ. ಮಗುವಿನ ಮುಂದಿನ ಹಲ್ಲುಗಳು ಕಾಣುವಂತಹ ಮುಗ್ಧ ನಗು ಎಲ್ಲರನ್ನೂ ಸಮ್ಮೋಹನಗೊಳಿಸುತ್ತದೆ. ಇಂತಹ ಮುಗ್ಧ ಮಕ್ಕಳ ನಿಷ್ಕಲ್ಮಷ ನಗು ಜಾತಿ ಭೇದವಿಲ್ಲದೆ, ಜನಾಂಗೀಯ ವರ್ಣಭೇದವೆನ್ನದೆ, ಯಾವ ದೇಶದ ಗಡಿಗಳ ಮಿತಿಯಿಲ್ಲದೆ ತನ್ನ ಸುಂದರ ಮುಖವನ್ನು ವಿವಿಧ ಮಾಧ್ಯಮಗಳಲ್ಲಿ ಛಾಯಾಚಿತ್ರ ಮತ್ತು ವಿಡಿಯೋ ತುಣುಕು, ಜಾಹೀರಾತುಗಳ ಮೂಲಕ ವೇಗವಾಗಿ ಅಂತರ್ಜಾಲದಲ್ಲಿ ಪ್ರಸಾರವಾಗಿ ತನ್ನ ಪ್ರಸಿದ್ದಿ ಹೆಚ್ಚಿಸಿಕೊಳ್ಳುತ್ತವೆ.

ಮಗು 3 ವರ್ಷದ ಅವಧಿಯೊಳಗೆ ತನ್ನೆಲ್ಲಾ ಹಾಲು ಹಲ್ಲುಗಳನ್ನು ಬಳಸಿ ದ್ರವಹಾರದಿಂದ ಘನಹಾರ ಸೇವಿಸಿ ಸಂತೋಷ ಪಡುತ್ತದೆ. ಇದು ದೇಹದ ಬೆಳವಣಿಗೆಗೂ ಹೆಚ್ಚು ಸಹಕಾರಿಯಾಗುತ್ತದೆ. ಮೊದಲ ಹಲ್ಲು ಹುಟ್ಟಿದ ಕ್ಷಣದಿಂದಲೇ ಬಾಯಿ ಮತ್ತು ಹಲ್ಲಿನ ಶುಚಿತ್ವಕ್ಕೆ ಗಮನ ಕೊಡಬೇಕಾಗುತ್ತದೆ. ಶುದ್ದವಾದ ಬಟ್ಟೆಯಿಂದ ಹಾಲು ಹಲ್ಲುಗಳನ್ನು ಮತ್ತು ವಸಡನ್ನು ಸ್ವಚ್ಛ ಮಾಡಬೇಕು. ನಂತರ ಪೋಷಕರು ಮೃದುವಾದ ನೈಲಾನ್ ಎಳ್ಳೆಯುಳ್ಳ ಟೂತ್ ಬ್ರಷ್ ಮತ್ತು ಪೇಸ್ಟ್‌ನಿಂದ ಹಲ್ಲನ್ನು ಶುಚಿಗೊಳಿಸುವ ವಿಧಾನವನ್ನು ಮಕ್ಕಳಿಗೆ ಕಲಿಸಬೇಕು. ಹೀಗೆ ಮಾಡುವುದರಿಂದ ಹಾಲು ಹಲ್ಲಿನ ದಂತಕುಳ್ಳಿ ಆಗುವುದನ್ನು ತಪ್ಪಿಸಬಹುದು. ಮಗು ಈ ವಯಸ್ಸಿನಲ್ಲಿ ಸಿಹಿ ಪದಾರ್ಥಗಳ (ಚಾಕ್ಲೇಟ್) ಸೇವನೆಗೆ ಒಲವು ಹೊಂದಿರುವುದು ಸಾಮಾನ್ಯ. ಪೋಷಕರು ಅದನ್ನು ತಡೆಯಲು ಸಾಧ್ಯವಿಲ್ಲ. ಚಾಕಲೇಟ್‌ನಂತಹ ಜಿಗಟು ಪದಾರ್ಥವು ಹಲ್ಲುಗಳ ಸಂದಿಗಳಲ್ಲಿ ಶೇಖರಣೆಗೊಂಡು ದಂತಕುಳಿ ಉಂಟಾಗಿ ಉಲ್ಬಣಗೊಳ್ಳುವ ಸೋಂಕು ಮತ್ತು ನೋವನ್ನು ತಡೆಯಲು ಪೋಷಕರು ಮಗುವಿನ ಹಲ್ಲನ್ನು ಕೂಡಲೇ ಸ್ವಚ್ಛಗೊಳಿಸುವ ಕಡೆಗೆ ಗಮನಹರಿಸಬೇಕು. ಮಗು ತನ್ನ ಉಚ್ಚಾರದಿಂದ ಭಾವನೆಗಳನ್ನು ಪದಗಳ ಮುಖಾಂತರ ವ್ಯಕ್ತಪಡಿಸಲು ಪ್ರಯತ್ನಿಸಿರುತ್ತದೆ. ಆಗ ಆರಂಭವಾಗುವ ತೊದಲು ನುಡಿಗಳು ಮನೆಯವರೆಲ್ಲರ ಮನವನ್ನು ಮುದಗೊಳಿಸಿ, ಒಂದು ಸುಂದರ ವಾತಾವರಣವನ್ನು ನಿರ್ಮಿಸುತ್ತದೆ. ದಿನಗಳೆದಂತೆ ಮಾತಿನಲ್ಲಿ ಸ್ಪಷ್ಟತೆಯನ್ನು ಹಾಗೂ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹಲ್ಲುಗಳು ಸಹಕಾರಿಯಾಗುತ್ತವೆ.

ಪ್ರೌಢಾವಸ್ಥೆಯಲ್ಲಿ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲುಗಳ ಒಟ್ಟಾಗಿರುವುದರಿಂದ ಹಲ್ಲುಗಳ ಜೋಡಣೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಈ ಹಂತದಲ್ಲಿ ಒಮ್ಮೆ ದಂತ ವೈದ್ಯರಲ್ಲಿ ಮಗುವನ್ನು ಪರೀಕ್ಷೆಗೊಳಪಡಿಸಬೇಕು. ಅವರ ಸಲಹೆ ಪಡೆದು ಅವಶ್ಯವಿರುವಂತಹ ವಕ್ರದಂತ ಚಿಕಿತ್ಸೆಯನ್ನು ಪಡೆಯಬಹುದು.

ಯೌವ್ವನಾವಸ್ಥೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಮಹತ್ವಾಕಾಂಕ್ಷೆಯ ಬೇಡಿಕೆ ಪೂರೈಸಲು ಉಂಟಾಗುವ ಓದಿನ ಒತ್ತಡ, ದೇಹದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಯಿಂ ದಾಗಿ ಯುವಜನರು ಮಾನಸಿಕವಾಗಿ ಧೈರ್ಯ ಕಳೆದುಕೊಂಡು ದುರಭ್ಯಾಸಗಳಾದ ಅತಿಯಾದ ಗುಟ್ಕಾ, ತಂಬಾಕು, ಧೂಮಪಾನ, ಮದ್ಯಪಾನ ಸೇವನೆಯಿಂದ ಬಾಯಿಯ ಆರೋಗ್ಯವನ್ನು ನಿರ್ಲಕ್ಷ್ಯಿಸಬಹುದು. ಇದರಿಂದ ವಸಡು ರೋಗದ ಜೊತೆಗೆ ಆಂತರಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳಬಹುದು. ಇದನ್ನು ತಡೆಗಟ್ಟಲು ಮಾನಸಿಕ ಆರೋಗ್ಯ ಸದೃಢಗೊಳಿಸಲು ಧ್ಯಾನ, ವ್ಯಾಯಾಮ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು, ಅವಶ್ಯಕತೆ ಇದ್ದಲ್ಲಿ ವೈದ್ಯರಿಂದ ಆಪ್ತ ಸಮಾಲೋಚನೆ ಮಾಡಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಇಳಿ ವಯಸ್ಸಿನಲ್ಲಿ ವಯೋಸಹಜ ಬದಲಾವಣೆಯಿಂದ ಹಲ್ಲು ಮತ್ತು ವಸಡಿನಲ್ಲಿ ಕಾಣುವ ವ್ಯತ್ಯಾಸಗಳು (ಹಲ್ಲು ಮತ್ತು ವಸಡಿನ ಸವಕಳಿ, ಹಲ್ಲು ಉದುರುವುದು), ದೇಹಕ್ಕೆ ಇತರೆ ಆಂತರಿಕ ರೋಗಗಳಿಂದ ನಿಶ್ಯಕ್ತಿ ಉಂಟಾಗುವುದು. ಈ ಸಮಯದಲ್ಲಿ ದಂತ ವೈದರ ಸಲಹೆ ಪಡೆದು, ಕೃತಕ ದಂತಪಂಕ್ತಿ, ಆಧುನಿಕ ಚಿಕಿತ್ಸೆಗಳಾದ ಹಲ್ಲಿನ ಇಂಪ್ಲಾಂಟ್ ಚಿಕಿತ್ಸೆ ಪಡೆಯುವುದರಿಂದ ಮುಖದ ಅಂದವನ್ನು ಹೆಚ್ಚಿಸಿ, ಮಾತುಗಳ ಉಚ್ಚಾರಣೆಯಲ್ಲಿ ಸ್ಪಷ್ಟತೆ ಹೊಂದಿ, ಸಮತೋಲನ ಆಹಾರ ಸೇವಿಸಿ ಸದೃಢ ದೇಹ, ಮನಸ್ಸು ಹೊಂದಿ ಒಂದು ಉತ್ತಮ ಸಾರ್ಥಕ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ.

ಹೀಗೆ ಜೀವನದ ಎಲ್ಲಾ ಹಂತಗಳಲ್ಲೂ ಬಾಯಿಯ ಆರೋಗ್ಯ ಪ್ರಮುಖ ಪಾತ್ರ ವಹಿಸುವುದರಿಂದ ಅದನ್ನು ಕಾಪಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ.

ಆರೋಗ್ಯವನ್ನು ನಿರ್ಲಕ್ಷ್ಯಿಸಬಹುದು. ಇದರಿಂದ ವಸಡು ರೋಗದ ಜೊತೆಗೆ ಆಂತರಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳಬ ಹುದು. ಇದನ್ನು ತಡೆಗಟ್ಟಲು ಮಾನಸಿಕ ಆರೋಗ್ಯ ಸದೃಢಗೊಳಿಸಲು ಧ್ಯಾನ, ವ್ಯಾಯಾಮ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು, ಅವಶ್ಯಕತೆ ಇದ್ದಲ್ಲಿ ವೈದ್ಯರಿಂದ ಆಪ್ತ ಸಮಾಲೋಚನೆ ಮಾಡಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಇಳಿ ವಯಸ್ಸಿನಲ್ಲಿ ವಯೋಸಹಜ ಬದಲಾವಣೆಯಿಂದ ಹಲ್ಲು ಮತ್ತು ವಸಡಿನಲ್ಲಿ ಕಾಣುವ ವ್ಯತ್ಯಾಸಗಳು (ಹಲ್ಲು ಮತ್ತು ವಸಡಿನ ಸವಕಳಿ, ಹಲ್ಲು ಉದುರುವುದು), ದೇಹಕ್ಕೆ ಇತರೆ ಆಂತರಿಕ ರೋಗಗಳಿಂದ ನಿಶ್ಯಕ್ತಿ ಉಂಟಾಗುವುದು. ಈ ಸಮಯದಲ್ಲಿ ದಂತ ವೈದರ ಸಲಹೆ ಪಡೆದು, ಕೃತಕ ದಂತಪಂಕ್ತಿ, ಆಧುನಿಕ ಚಿಕಿತ್ಸೆಗಳಾದ ಹಲ್ಲಿನ ಇಂಪ್ಲಾಂಟ್ ಚಿಕಿತ್ಸೆ ಪಡೆಯುವುದರಿಂದ ಮುಖದ ಅಂದವನ್ನು ಹೆಚ್ಚಿಸಿ, ಮಾತುಗಳ ಉಚ್ಚಾರಣೆಯಲ್ಲಿ ಸ್ಪಷ್ಟತೆ ಹೊಂದಿ, ಸಮತೋಲನ ಆಹಾರ ಸೇವಿಸಿ ಸದೃಢ ದೇಹ, ಮನಸ್ಸು ಹೊಂದಿ ಒಂದು ಉತ್ತಮ ಸಾರ್ಥಕ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ.

ಹೀಗೆ ಜೀವನದ ಎಲ್ಲಾ ಹಂತಗಳಲ್ಲೂ ಬಾಯಿಯ ಆರೋಗ್ಯ ಪ್ರಮುಖ ಪಾತ್ರ ವಹಿಸುವುದರಿಂದ ಅದನ್ನು ಕಾಪಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ.


ಡಾ. ಎಂ.ಜಿ.ತ್ರಿವೇಣಿ
ಡಾ. ಜಿ.ವಿ.ಗಾಯತ್ರಿ
ಪ್ರಾಧ್ಯಾಪಕರು, ವಸಡು ಶಸ್ತ್ರ ಚಿಕಿತ್ಸಾ ವಿಭಾಗ
ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದಾವಣಗೆರೆ.

error: Content is protected !!