ಗಾಜಿನ ಮನೆ ಸ್ವಚ್ಚತೆ ಕಾಪಾಡಿ

ಗಾಜಿನ ಮನೆ ಸ್ವಚ್ಚತೆ ಕಾಪಾಡಿ

ಮಾನ್ಯರೇ, 

ಗಾಜಿನ ಮನೆಯೊಳಗೆ ಕಾಲಿಟ್ಟರೆ ಸಾಕು ಸ್ವಚ್ಛತೆಯು ಮಾಯವಾಗಿ ರುವುದು ಕಂಡು ಬರುತ್ತದೆ. ಸಮರ್ಪಕವಾದ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರುವುದರಲ್ಲಿ ವಿಫಲವಾಗಿದೆ ಎಂಬುದು ಗೋಚರವಾಗುತ್ತದೆ.

ಪ್ರವೇಶ ದರ 20 ರೂಪಾಯಿಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿಯೂ ತುಕ್ಕು ಹಿಡಿದಿರುವ ಗಿಡಮರಗಳ ಪರಿಚಯವುಳ್ಳ ಫಲಕಗಳು, ನೀರು ಕುಡಿದು ಎಸೆದ ಪ್ಲಾಸ್ಟಿಕ್ ಬಾಟಲಿಗಳು, ಸ್ಪ್ರಿಂಕ್ಲರ್ ನೀರು ಪೂರ್ಣ ಪ್ರಮಾಣದಲ್ಲಿ ಗಿಡಗಳ ಮೇಲೆ ಚೆಲ್ಲದೇ ಇರುವುದು, ಬಹಳಷ್ಟು ಕಡೆ ಕಸಗಳನ್ನು ಹಾಗೆಯೇ ಬಿಟ್ಟಿರುವುದು, ಗಾಜಿನ ಮನೆಯೊಳಗೆ ನೆಲವನ್ನು ಶುದ್ದಿಗೊಳಿಸದೇ ಧೂಳಿನ ಹೆಜ್ಜೆಗುರುತುಗಳು ಎಲ್ಲಾ ಕಂಡು ಬಂದು ಗಾಜಿನ ಮನೆಯ ಅಭಿಮಾನಿ ವರ್ಗಕ್ಕೆ ಅಥವಾ ಪ್ರೇಕ್ಷಕರಾಗಿ ಕಾಣಲು ಬರುವ ಸಾರ್ವಜನಿಕರಿಗೆ ಮನಸೂರೆಗೊಳಿಸದಂತೆ ಅಲ್ಲಿಯ ಪರಿಸರವು ನಕಾರಾತ್ಮಕವಾಗಿ ಕಾಣುತ್ತದೆ.

ಹಾಗೆಯೇ ಸಾರ್ವಜನಿಕರು ಕೂಡ ಗಾಜಿನ ಮನೆಯ ಕಡೆಗೆ ಹೋದಾಗ ಸ್ವಚ್ಛತೆಯನ್ನು ಕಾಪಾಡುವಲ್ಲಿ ಗಮನ ವಹಿಸಬೇಕಿದೆ. ಯಾವುದೇ ಒಂದು ಯೋಜನೆಯನ್ನು ತಂದು, ನಿರ್ಮಿಸುವುದು ಸುಲಭದ ಮಾತಲ್ಲ. ಶಿಸ್ತನ್ನು ಕಾಪಾಡಲು ಅಗತ್ಯ ಇರುವ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಜನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪ್ರತಿ ಭಾನುವಾರದಂದು ಯುವ ಸಮೂಹಕ್ಕೆ ವೇದಿಕೆಯನ್ನು ಅಲ್ಲಿ ಕಲ್ಪಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಆಗುತ್ತಾ ಇದ್ದಾಗ ಭೇಟಿ ಮಾಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತದೆ. ದಯವಿಟ್ಟು ಈ ಕೂಡಲೇ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಬೇಕು.


– ವಾದಿರಾಜ ಭಟ್ ವೈ, ವಕೀಲರು, ದಾವಣಗೆರೆ.

error: Content is protected !!