ರಸ್ತೆ ಅಪಘಾತ: ಗಂಟೆಗೆ 19 ಸಾವು, ಪರಿಹಾರ ಏನು ?

 ಮಾನ್ಯರೇ,

ದೇಶದಲ್ಲಿ ರಸ್ತೆ ಅಪಘಾತ ಮತ್ತು ಜನರ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದಕ್ಕಾಗಿ 2030ರೊಳಗೆ ಶೇ 50 ರಷ್ಟಕ್ಕೆ ತಗ್ಗಿಸುವುದು ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಹೇಳಿರುವುದು ಸಂತಸದ ವಿಷಯ. ದೇಶದಲ್ಲಿ ಒಂದು ಗಂಟೆಗೆ 19 ಜನ ಸಾಯುತ್ತಿರುವುದು ಶೋಚನೀಯ. ಇದು ಖಂಡಿತವಾಗಿಯೂ ರಸ್ತೆ ಸುರಕ್ಷತೆಯು ಆತಂಕಕಾರಿಯಾಗಿದೆ ಎಂಬುದಕ್ಕೆ ಸೂಚನೆಯಾಗಿದೆ ಮತ್ತು ರಾಷ್ಟ್ರದ ಜನರಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತುವ ಅವಶ್ಯಕತೆಯಿದೆ. ಹೆಚ್ಚಾಗಿ ಒಂದು ಕುಟುಂಬದ ಬೆನ್ನೆಲುಬಾಗಿರುವ ಯುವಕರು ಅಥವಾ ಮಧ್ಯ ವಯಸ್ಕರು ಅಪಘಾತದಲ್ಲಿ ಸಾಯುತ್ತಿರುವುದು ದುಃಖದ ವಿಷಯ. ಅಪಘಾತಗಳು ಏಕೆ ನಡೆಯುತ್ತವೆ ಎಂಬುದನ್ನು ಜನರು ಮೊದಲು ಅರ್ಥಮಾಡಿಕೊಳ್ಳಬೇಕು.

ದುಡುಕಿನ ಚಾಲನೆ, ಸಂಚಾರ ನಿಯಮಗಳನ್ನು ಪಾಲಿಸದಿರುವುದು, ಅಜಾಗರೂಕ ವೇಗ, ವಿಚಲಿತ ಚಾಲಕರು, ಕುಡಿದು ವಾಹನ ಚಲಾಯಿಸುವುದು, ರಸ್ತೆಯಲ್ಲಿ ಅಪ್ರಾಪ್ತ ವಯಸ್ಸಿನ ಚಾಲಕರು, ಕಾನೂನು ಜಾರಿಯಿಂದ ಕಟ್ಟುನಿಟ್ಟಿನ ಕೊರತೆ ಮತ್ತು ರಸ್ತೆಗಳ ವಿಷಾದನೀಯ ಸ್ಥಿತಿಗಳು ರಸ್ತೆ ಅಪಘಾತಗಳಿಗೆ ಕಾರಣಗಳಾಗಿವೆ. ಅಪಘಾತವನ್ನು ತಪ್ಪಿಸಲು ದಯವಿಟ್ಟು ಈ ಕೆಳಗಿನ ಸಂಚಾರಿ ನಿಯಮಗಳನ್ನು ಪಾಲಿಸೋಣವೇ..?

* ಅನಗತ್ಯವಾಗಿ ಓವರ್‌ಟೇಕ್ ಮಾಡಬೇಡಿ.  * ಇತರೆ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ.  * ಚಾಲನೆ ಮಾಡುವಾಗ ಮೊಬೈಲ್ ಬಳಸ ಬೇಡಿ.  * ಅನುಸರಿಸಬೇಕಾದ ಸಂಕೇತಗಳ ಪಾಲನೆ.  * ಸುರಕ್ಷತೆಗಾಗಿ ಸೀಟ್ ಬೆಲ್ಟ್ ಬಳಸಿ.  * ತಿರುವು ಸೂಚಕಗಳನ್ನು ಬಳಸಿ.  * ಕುಡಿದು ವಾಹನ ಚಲಾಯಿಸದಿರಿ. ಇವೆ ಲ್ಲವುಗಳನ್ನು ಜಾಗರೂಕತೆಯಿಂದ ಅರಿತು ಸಂಚಾರಿ ನಿಯಮಗಳನ್ನು ಪಾಲಿ ಸೋಣ. ದುಡುಕಿ ನಮ್ಮ ಅಮೂಲ್ಯವಾದ ಪ್ರಾಣಹಾನಿ ಮಾಡಿಕೊಳ್ಳುವುದು ಬೇಡ.


ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.

error: Content is protected !!