ಯುಪಿಎಸ್‌ಸಿ: ದಾವಣಗೆರೆ ಸೌಭಾಗ್ಯಗೆ 101ನೇ ರ‍್ಯಾಂಕ್

ಯುಪಿಎಸ್‌ಸಿ: ದಾವಣಗೆರೆ ಸೌಭಾಗ್ಯಗೆ 101ನೇ ರ‍್ಯಾಂಕ್

ಬೆಂಗಳೂರು, ಏ. 16 – ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಸೌಭಾಗ್ಯ ಬೀಳಗಿಮಠ ಅವರು 101ನೇ ರ‍್ಯಾಂಕ್ ಪಡೆದಿದ್ದಾರೆ. 

ಐ.ಎ.ಎಸ್. ಪರೀಕ್ಷೆ ಎಂದೇ ಹೆಸ ರಾಗಿರುವ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಈ ಸಾಧನೆ ಮಾಡಿರುವ ಸೌಭಾಗ್ಯ ಅವರು ದಾವಣಗೆರೆಯವರು. ಅವರು ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿಯ ಪುತ್ರಿ. ಶರಣಯ್ಯ ಅವರು ನರ್ಸರಿ ನಡೆಸುತ್ತಿದ್ದಾರೆ, ಶರಣಮ್ಮ ಅವರು ಗೃಹಿಣಿ. ಸೌಭಾಗ್ಯ ಅವರು ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. 

ದಾವಣಗೆರೆಯ ಸಿದ್ಧಗಂಗಾ ಪಿಯು ಸೈನ್ಸ್ ಕಾಲೇಜಿನಲ್ಲಿ ಶೇ. 98 ಅಂಕ ಗಳಿಸಿದ್ದರು. ನಂತರ 2023ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್.ಸಿ ಕೃಷಿ ಪದವಿ ಪೂರೈಸಿದ್ದರು.

ಈ ಬಗ್ಗೆ ಮಾತನಾಡಿರುವ ಸೌಭಾಗ್ಯ, ಯಾವುದೇ ಕೇಂದ್ರದಲ್ಲಿ ಕೋಚಿಂಗ್‌ ಪಡೆದಿರಲಿಲ್ಲ. ಆನ್‌ಲೈನ್‌ ಮಾಕ್‌ ಟೆಸ್ಟ್‌ ಸರಣಿ ಅಟೆಂಡ್‌ ಮಾಡಿದ್ದೆ ಅಷ್ಟೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬೋಧಕಿ ಎಂ.ಅಶ್ವಿನಿ ಅವರು ನನ್ನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರೋತ್ಸಾಹ ನೀಡಿದರು. ಪರೀಕ್ಷೆ ತಯಾರಿಗೆ ಅವರೇ ಎಲ್ಲ ರೀತಿಯ ಮಾರ್ಗದರ್ಶನ ನೀಡಿದರು ಎಂದು ತಿಳಿಸಿದ್ದಾರೆ. ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಈಗ ಗಳಿಸಿರುವ ರಾಂಕಿಂಗ್‌ಗೆ ಬಹುಶಃ ಐ.ಪಿ.ಎಸ್. ಸಿಗಬಹುದು. ಐ.ಎ.ಎಸ್. ಹಂತದ ರಾಂಕ್ ಪಡೆಯಲು ಮತ್ತೆ ಪ್ರಯತ್ನ ನಡೆಸುತ್ತೇನೆ ಎಂದವರು ಹೇಳಿದ್ದಾರೆ.

error: Content is protected !!