ಮಾದಿಗ ಸಮುದಾಯ ಮತ ಬ್ಯಾಂಕ್ ಅಲ್ಲ

ದಾವಣಗೆರೆ, ಏ. 29- ಮಾದಿಗ ಸಮುದಾಯ ಮತ ಬ್ಯಾಂಕ್ ಅಲ್ಲ ಎಂದಿರುವ ಶ್ರೀ ಆದಿಜಾಂಭವ ಗುರುಪೀಠದ ಶ್ರೀ ಷಡಾಕ್ಷರಿ ಮುನಿ ದೇಶೀಕೇಂದ್ರ ಮಹಾಸ್ವಾಮೀಜಿ, ಸಮುದಾಯವನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಬುದ್ದಿ ಕಲಿಸುವಂತೆ ಕರೆ ನೀಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ಚುನಾವಣಾ ಸಂದರ್ಭದಲ್ಲಿ ಹಣದ ಆಮಿಷಕ್ಕೆ ಬಲಿಯಾಗದೆ ಜಾಗರೂಕರಾಗಿ ಮತ ಚಲಾಯಿಸಬೇಕು. ಏಕ ಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಷ್ಟ ನಿಲುವು ತಳೆಯದ ಹೊರತು ಸಮುದಾಯದ ಉದ್ಧಾರ ಸಾಧ್ಯವಿಲ್ಲ. ದಾಸ್ಯದ ಸಂಕೋಲೆ, ಗುಲಾಮಗಿರಿಯಿಂದ ಹೊರಬರಬೇಕಾದರೆ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಆದಿಜಾಂಭವ ಪೀಠ ಸಮುದಾಯ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ಹೇಳಿದರು.

error: Content is protected !!