ಜೀವನ ಯಾನ ಮುಗಿಸಿದ ‘ಪ್ರಚಂಡ ಕುಳ್ಳ’

ಜೀವನ ಯಾನ ಮುಗಿಸಿದ ‘ಪ್ರಚಂಡ ಕುಳ್ಳ’

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ 

ಬೆಂಗಳೂರು, ಏ. 16 – ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದ ಅವರು, ಹೃದಯಾಘಾತದಿಂದ ಕೊನೆಯುಸಿರೆಳೆದಿ ದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾಗಿರುವ ಅವರು, 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ.

ಬಳಲಿಕೆಯಾಗುತ್ತಿದೆ ಎಂದು ತಮ್ಮ ಮಗನಿಗೆ ಬೆಳಿಗ್ಗೆ ಹೇಳಿದ್ದ ದ್ವಾರಕೀಶ್, 9 ಗಂಟೆ ವೇಳೆಗೆ ಎಚ್ಚರಿಸುವಂತೆ ತಿಳಿಸಿದ್ದರು. ಆ ವೇಳೆಗೆ ಎಚ್ಚರಿಸಲು ಹೋದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆ ವೇಳೆಗೆ ಸಾವು ಸಂಭವಿಸಿತ್ತು ಎಂದು ಕುಟುಂಬದವರು ಹೇಳಿದ್ದಾರೆ.

ಡಾ. ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಮುಂತಾದ ಹಿರಿಯರ ಜೊತೆ ನಟಿಸಿದ್ದ ದ್ವಾರಕೀಶ್, ಹಾಸ್ಯ ಪಾತ್ರಗಳ ಮೂಲಕ ಜನಮನ ಸೂರೆಗೊಂಡಿದ್ದರು.

ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಪ್ರಾಥಮಿಕ, ಪ್ರೌಢಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಅಧ್ಯಯನ ಮಾಡಿದ್ದರು. ನಂತರ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 

1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಪಾದಾ ರ್ಪಣೆ ಮಾಡಿದರು. 1966ರಲ್ಲಿ ಅವರು §ಮಮತೆ ಯ ಬಂಧನ¬ ಚಿತ್ರದ ಸಹ ನಿರ್ಮಾಪಕರಾಗಿದ್ದರು. 1969ರಲ್ಲಿ ರಾಜ್‌ಕುಮಾರ್ ಅವರು ಅಭಿನಯಿ ಸಿದ್ದ §ಮೇಯರ್ ಮುತ್ತಣ್ಣ¬ ಚಿತ್ರವನ್ನು ನಿರ್ಮಿಸಿದ್ದು, ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟಿತ್ತು.

ಕುಳ್ಳಗಿರುವುದು ಹಲವರಿಗೆ ಹಿನ್ನಡೆಯಾಗಿರಬಹುದು. ಆದರೆ, ಇದನ್ನೇ ಯಶಸ್ಸಿನ ಮೆಟ್ಟಿಲು ಮಾಡಿಕೊಂಡಿದ್ದ ದ್ವಾರಕೀಶ್, §ಪ್ರಚಂಡ ಕುಳ್ಳ¬, §ಕುಳ್ಳ ಏಜೆಂಟ್ 000¬, §ಕೌಬಾಯ್ ಕುಳ್ಳ¬, §ಸಿಂಗಾಪುರದಲ್ಲಿ ರಾಜಾ ಕುಳ್ಳ¬, §ಕುಳ್ಳ ಕಳ್ಳಿ¬, ಹಾಗೂ §ಹೊಸ ಕಳ್ಳ ಹಳೇ ಕುಳ್ಳ¬ ಮುಂತಾದ ಚಿತ್ರಗಳಲ್ಲಿ ಅವರು ಹೆಸರು ಮಾಡಿದ್ದರು. ಹೀಗಾಗಿ ಅವರನ್ನು §ಪ್ರಚಂಡ ಕುಳ್ಳ¬ ಎಂದೇ ಕರೆಯಲಾಗುತ್ತಿತ್ತು.

1985ರಲ್ಲಿ ಅವರು §ನೀ ಬರೆದ ಕಾದಂಬರಿ¬ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಈ ಚಿತ್ರ ಯಶಸ್ಸನ್ನೂ ಕಂಡಿತ್ತು. ಅವರ ನಿರ್ಮಾಣದ §ಆಪ್ತಮಿತ್ರ¬ ಚಿತ್ರ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ದ್ವಾರಕೀಶ್. ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ ಎಂದಿದ್ದಾರೆ.

error: Content is protected !!