ಹೊನ್ನಾಳಿಯ ಸಾಯಿ ಗುರುಕುಲ ಕಾಲೇಜಿಗೆ ಶೇ. 100 ಫಲಿತಾಂಶ

ಹೊನ್ನಾಳಿಯ ಸಾಯಿ ಗುರುಕುಲ ಕಾಲೇಜಿಗೆ ಶೇ. 100 ಫಲಿತಾಂಶ

ಹೊನ್ನಾಳಿ, ಏ. 15- ತಾಲ್ಲೂಕಿನ ಹೆಚ್. ಕಡದಕಟ್ಟೆ ಗ್ರಾಮದ ಶ್ರೀ ಸಾಯಿ ಗುರುಕುಲ ಪಿಯು ಕಾಲೇಜಿನ ವಿದ್ಯಾರ್ಥಿಗಳು 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ. 100 ರಷ್ಟು ಫಲಿತಾಂಶ ಗಳಿಸಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ತಿಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳಲ್ಲಿ ಐವರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜೆ.ಎನ್. ಸಂಜನಾ  600 ಅಂಕಗಳಿಗೆ ಶೇ. 95.3 ಹಾಗೂ ರೋಷನ್ ಮಿರ್ಜಾ ಶೇ. 92 ರಷ್ಟು ಫಲಿತಾಂಶ ಪಡೆದು ಕ್ರಮವಾಗಿ ಕಾಲೇಜಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. 

error: Content is protected !!